Wednesday , August 15 2018
ಕೇಳ್ರಪ್ಪೋ ಕೇಳಿ
Home / News NOW / ಬಾಂಗ್ಲಾದೇಶದಲ್ಲಿ ಮತ್ತೆ ಉಗ್ರರ ಅಟ್ಟಹಾಸ : ಈದ್ ಸಂಭ್ರಮದಲ್ಲಿ ಬಾಂಬ್ ದಾಳಿ : ನಾಲ್ವರ ದುರ್ಮರಣ

ಬಾಂಗ್ಲಾದೇಶದಲ್ಲಿ ಮತ್ತೆ ಉಗ್ರರ ಅಟ್ಟಹಾಸ : ಈದ್ ಸಂಭ್ರಮದಲ್ಲಿ ಬಾಂಬ್ ದಾಳಿ : ನಾಲ್ವರ ದುರ್ಮರಣ

ಢಾಕಾ : ಮೊನ್ನೆಯಷ್ಟೇ ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಈಗ ಮತ್ತೆ ಅದೇ ಮರುಕಳಿಸಿದೆ. ಈದ್ ಆಚರಣೆ ನಡೆಯುವ ಬಾಂಗ್ಲಾದ ಅತೀ ದೊಡ್ಡ ಈದ್ಗಾ ಮೈದಾನದಲ್ಲೇ ಉಗ್ರರು ದಾಳಿ ಮಾಡಿದ್ದಾರೆ. ಶುಭಾಶಯ ವಿನಿಮಯ ಮಾಡಿಕೊಳ್ಳುವ ಪ್ರವೇಶದ್ವಾರದಲ್ಲಿ ಉಗ್ರರು ಸ್ಫೋಟ ಮಾಡಿದ್ದು,ಓರ್ವ ಪೊಲೀಸ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಕಿಶೋರೆಗಂಜ್ ಪ್ರದೇಶದ ಶೋಲಾಕಿಯಾ ಈದ್ಗಾ ಮೈದಾನದಲ್ಲಿ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಹಬ್ಬದ ಆಚರಣೆ ಸಂದರ್ಭದಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ಸೇರಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

About sudina

Check Also

ಮೈಸೂರು ಹಾಸ್ಟೆಲ್‍ಗೆ ನುಗ್ಗಿ ಕಾಟ : ಬಂಟ್ವಾಳದಲ್ಲಿ ಆರೋಪಿ ಬಂಧನ

ಮಂಗಳೂರು : ಜುಲೈ 20 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ …

Leave a Reply

Your email address will not be published. Required fields are marked *

error: Content is protected !!