Friday , October 19 2018
ಕೇಳ್ರಪ್ಪೋ ಕೇಳಿ
Home / News NOW / ಮಂಗಳೂರು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ : ಸಾವಿಗೆ ಕಾರಣವಾಯ್ತಾ ಅಧಿಕಾರಿಗಳ, ಸಚಿವರ ಕಿರುಕುಳ..?

ಮಂಗಳೂರು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ : ಸಾವಿಗೆ ಕಾರಣವಾಯ್ತಾ ಅಧಿಕಾರಿಗಳ, ಸಚಿವರ ಕಿರುಕುಳ..?

4444ಮಡಿಕೇರಿ : ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿಯ ವಿನಾಯಕ ಲಾಡ್ಜ್ ನ ರೂಂ. ನಂಬರ್ 307ರಲ್ಲಿ ಗಣಪತಿ ನೇಣಿಗೆ ಶರಣಾಗಿದ್ದಾರೆ. ಗಣಪತಿ ಮೂರು ತಿಂಗಳ ಹಿಂದೆಯಷ್ಟೇ ವರ್ಗಾವಣೆಗೊಂಡು ಮಂಗಳೂರು ಐ.ಜಿ.ಕಚೇರಿಗೆ ಬಂದಿದ್ದರು. ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳು ಹಾಗೂ ಸಚಿವ ಕೆ.ಜೆ.ಜಾರ್ಜ್ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
33

ಇಲಾಖೆ ವಿರುದ್ಧ ಅಸಮಾಧಾನ : ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಗಣಪತಿ ಅನುಪಮ ಶೆಣೈ ಬಳಿಕ ಪೊಲೀಸ್ ಇಲಾಖೆ ಹಾಗೂ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಇವತ್ತು ಮಡಿಕೇರಿಯ ಸ್ಥಳೀಯ ಟಿವಿ ಚಾನೆಲ್ ಕಚೇರಿಗೆ ಸಮವಸ್ತ್ರದಲ್ಲಿ ಬಂದಿದ್ದ ಗಣಪತಿ, ತಮಗೆ ಆಗುತ್ತಿರುವ ಅನ್ಯಾಯವನ್ನು ಹೇಳಿಕೊಂಡಿದ್ದರು. ನನಗೆ ಎಲ್ಲಿಯೂ ಪೋಸ್ಟಿಂಗ್ ಕೊಡುತ್ತಿಲ್ಲ. ನನ್ನ ಮೇಲೆಯೇ ಆರೋಪ ಹೊರಿಸಲಾಗಿದೆ. ಐಜಿಯಾಗಿದ್ದ ಪ್ರಸಾದ್ ಹಾಗೂ ಮೊಹಂತಿ ಕಿರಕುಳ ನೀಡಿದ್ದಾರೆ. ನನಗೆ ಏನಾದರೂ ಆದರೆ ಈ ಅಧಿಕಾರಿಗಳು ಹಾಗೂ ಸಚಿವ ಜಾರ್ಜ್ ಕಾರಣ. ಈ ಸರಕಾರದಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಸರ್ಕಾರ ಬದಲಾಗಬೇಕು ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.

777 ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆ : ಎಂ.ಕೆ.ಗಣಪತಿಗೆ ಇತ್ತೀಚೆಗಷ್ಟೇ ಡಿವೈಎಸ್ಪಿಯಾಗಿ ಪ್ರಮೋಷನ್ ಆಗಿತ್ತು. ರಜೆಯಲ್ಲಿ ಊರಿನಲ್ಲಿದ್ದ ಗಣಪತಿ ಎರಡ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ವರ್ಗಾವಣೆಗೊಂಡು ಮಂಗಳೂರು ಐ.ಜಿ.ಕಚೇರಿಗೆ ಬಂದಿದ್ದರು. ಆದರೆ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ..

ಮಂಗಳೂರಿನಲ್ಲೂ ಕರ್ತವ್ಯ ನಿರ್ವಹಿಸಿದ್ದರು : 2008ರ ಚರ್ಚ್ ದಾಳಿ ವೇಳೆ ಗಣಪತಿ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಂಟ್ವಾಳ, ಪುತ್ತೂರಿನಲ್ಲಿ ಸಬ್‍ ಇನ್ಸ್ ಪೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಮೂಲಗಳ ಪ್ರಕಾರ ಗಣಪತಿ ನಿನ್ನೆ ಸಂಜೆ ಮಂಗಳೂರಿನಿಂದ ಮಡಿಕೇರಿಗೆ ತೆರಳಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಸಂಜೆ ವೇಳೆಗೆ ಪೊಲೀಸರು ಲಾಡ್ಜ್ ಭೇಟಿ ನೀಡಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!