Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / ರಜನಿ ಆರೋಗ್ಯವಾಗಿದ್ದಾರೆ : ಸುಳ್ ಸುದ್ದಿಗಳನ್ನು ನಂಬಬೇಡಿ

ರಜನಿ ಆರೋಗ್ಯವಾಗಿದ್ದಾರೆ : ಸುಳ್ ಸುದ್ದಿಗಳನ್ನು ನಂಬಬೇಡಿ

ಚೆನ್ನೈ : ಸೂಪರ್‍ಸ್ಟಾರ್ ರಜನಿ `ಕಬಾಲಿ’ ರಿಲೀಸ್‍ಗೆ ಸಿದ್ಧವಾಗುತ್ತಿದೆ, ವಿಶ್ವಾದ್ಯಂತ ಕಬಾಲಿಯದ್ದೇ ಸುದ್ದಿ ಕೇಳಿ ಬರುತ್ತಿದೆ. ಈ ನಡುವೆ, ರಜನಿಕಾಂತ್ ಆರೋಗ್ಯದ ಬಗ್ಗೆ ಆವಾಗಾವಾಗ ವದಂತಿಗಳು ಹಬ್ಬುತ್ತಲೇ ಇದೆ. ರಜನಿಗೆ ಆರೋಗ್ಯ ಹದಗೆಟ್ಟಿದ್ದು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ. ಅವರ ರೋಬೋ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗುತ್ತಿದೆ ಎಂಬುದು ಸದ್ಯ ಹಬ್ಬಿರುವ ಸುದ್ದಿ. ಆದರೆ, ಪ್ರೊಡಕ್ಷನ್ ಹೌಸ್‍ನ ಕ್ರಿಯೇಟಿವ್ ಹೆಡ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. `ಇತ್ತೀಚೆಗಷ್ಟೇ ರಜನಿ ಸಾರ್ ಜೊತೆ ನಾನು ಮಾತನಾಡಿದ್ದೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಆಗಸ್ಟ್‍ನಲ್ಲಿ ಅವರು ರೋಬೋ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ರಜನಿ ಆರೋಗ್ಯದ ಬಗ್ಗೆ ಸದ್ಯ ಹಬ್ಬಿರುವ ಸುದ್ದಿಯೆಲ್ಲಾ ಸುಳ್ಳು. ನಾವು ಆಗಸ್ಟ್‍ನಲ್ಲಿ ಶೂಟಿಂಗ್ ಮತ್ತೆ ಆರಂಭಿಸುತ್ತೇವೆ’ ಎಂದು ರಾಜು ಮಹಾಲಿಂಗಂ ಹೇಳಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!