Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಲಿವುಡ್‍ನ ಹಿರಿಯ ಸಂಗೀತ ನಿರ್ದೇಶಕ ಓಮಿ ಇನ್ನಿಲ್ಲ

ಬಾಲಿವುಡ್‍ನ ಹಿರಿಯ ಸಂಗೀತ ನಿರ್ದೇಶಕ ಓಮಿ ಇನ್ನಿಲ್ಲ

ಮುಂಬೈ : ಬಾಲಿವುಡ್‍ನ ಹಿರಿಯ ಸಂಗೀತ ನಿರ್ದೇಶಕ ಓಂ ಪ್ರಕಾಶ್ ಸೋನಿಕ್ ವಿಧಿವಶರಾಗಿದ್ದಾರೆ. ಎಲ್ಲರೂ ಇವರನ್ನು ಓಮಿ ಎಂದೇ ಕರೆಯುತ್ತಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಓಮಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಓರ್ವ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಕೆಲವು ದಿನಗಳಿಂದ ಇವರು ಜುಹೂನ ಭಾರತೀಯ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅಂಧ ಸಂಗೀತ ನಿರ್ದೇಶಕ ಮಾಸ್ಟರ್ ಸೋನಿಕ್ ಅವರ ಸಂಬಂಧಿ ಇವರು. ಇವರಿಬ್ಬರು ಜೊತೆಯಾಗಿ ಸೇರಿ ಸೋನಿಕ್ ಓಮಿ ತಂಡ ಮಾಡಿ ಸುಮಾರು 125ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ಸಂಗೀತ ನೀಡಿದ್ದಾರೆ. 1950 ರಿಂದ 1980ರ ವರೆಗೆ ಇವರು ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.

ಈಗಿನ ಪಾಕಿಸ್ತಾನದಲ್ಲಿರುವ ಸೈಲಕೋಟ್‍ನಲ್ಲಿ ಜನಿಸಿದ ಇವರು ದೇಶವಿಭಜನೆಯ ಬಳಿಕ ಇವರ ಕುಟುಂಬ ಭಾರತಕ್ಕೆ ಬಂದು ನೆಲೆಸಿತ್ತು. ಬಹುತೇಕ ದೆಹಲಿಯಲ್ಲೇ ಇವರು ವಾಸಿಸುತ್ತಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!