ಕಲಬುರಗಿ : ರೌಡಿಗಳ ಬಿರುದ್ಧದ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ವಿಧಿವಶರಾಗಿದ್ದಾರೆ. ಬ್ರೈನ್ ಟ್ಯೂಮರ್ ನಿಂದ ಬಲುತ್ತಿದ್ದ ಮಲ್ಲಮ್ಮ ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಮೂರು ತಿಂಗಳು ಬೆಂಗಳೂರಿನ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗಷ್ಟೆ ಇವರು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು.
2014ರ ಜನವರಿಯಲ್ಲಿ ರೌಡಿ ಮುನ್ನ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಡೆ ಸಾವಿಗೀಡಾಗಿದ್ದರು.
ಗೃಹ ಸಚಿವರ ಸಂತಾಪ:ಇನ್ನು ಮಲ್ಲಮ್ಮ ಸಾವಿಗೆ ಗೃಹಸಚಿವ ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ. ಬಂಡೆ ಕುಟುಂಬಕ್ಕೆ ನೀಡಬೇಕಾದ ಪರಿಹಾರವನ್ನು ಸರ್ಕಾರ ಕೊಟ್ಟಿದೆ. ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸಹಾಯ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.