Tuesday , December 12 2017
Home / Sandalwood / ನಟ ದಿಗಂತ್ ಕಣ್ಣಿಗೆ ಚಪ್ಪಲಿ ಎಸೆದ ನಟಿ…! : ಶೇಕಡಾ 30ರಷ್ಟು ಹಾನಿ…!

ನಟ ದಿಗಂತ್ ಕಣ್ಣಿಗೆ ಚಪ್ಪಲಿ ಎಸೆದ ನಟಿ…! : ಶೇಕಡಾ 30ರಷ್ಟು ಹಾನಿ…!

ಬೆಂಗಳೂರು : ಸ್ಯಾಂಡಲ್‍ವುಡ್‍ನ ದೂದ್‍ಪೇಡಾ ದಿಗಂತ್ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ದಿಗಂತ್ ಕಣ್ಣಿಗೆ ಹೈ ಹೀಲ್ಡ್ ಚಪ್ಪಲಿ ಚುಚ್ಚಿದೆ. ಪರಿಣಾಮ ದಿಗಂತ್ ಬಲ ಕಣ್ಣಿಗೆ ಗಂಭೀರ ಗಾಯ ಆಗಿದೆ.

ಏನಾಯ್ತು…? : `ಟಿಕೆಟ್ ಟು ಬಾಲಿವುಡ್’ ಹಿಂದಿ ಸಿನಿಮಾ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಾಯಕಿ ನಾಯಕನಿಗೆ ಚಪ್ಪಲಿ ಎಸೆಯುವ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ, ನಾಯಕಿ ಎಸೆದ ಚಪ್ಪಲಿ ತಪ್ಪಿ ದಿಗಂತ್ ಬಲಗಣ್ಣು ಸೀಳಿದೆ. ಇದಾದ ಬಳಿಕ ದಿಗಂತ್‍ಗೆ ವಿದೇಶದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಿಗಂತ್ ಚಿಕಿತ್ಸೆ ಪಡೆಯಲಿದ್ದಾರೆ. ಇನ್ನು, ಈ ಗಾಯದ ನಡುವೆಯೇ ದಿಗಂತ್ ತಮ್ಮ ಚಿತ್ರರಂಗದ ಕೆಲಸವನ್ನು ಮಾಡುತ್ತಿದ್ದಾರೆ. ಘಟನೆ ನಂತರವೇ `ಚೌಕ’ ಸಿನಿಮಾ ಕೂಡಾ ಪೂರ್ಣ ಮಾಡಿದ್ದಾರೆ.

ಪೆಟ್ಟಾಗಿರುವುದು ನಿಜ : ಇನ್ನು ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ದಿಗಂತ್, ನನ್ನ ಕಣ್ಣಿಗೆ ಪೆಟ್ಟಾಗಿರುವುದು ನಿಜ. ಕಣ್ಣು ಸ್ವಲ್ಪ ಬ್ಲರ್ ಆಗಿ ಕಾಣುತ್ತಿದೆ. ಆದರೆ, ದೃಷ್ಟಿ ಹೋಗಿರಲಿಲ್ಲ. ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದ್ದು, ಶೇಕಡಾ 70ರಷ್ಟು ದೃಷ್ಟಿ ಇದೆ. ಶೇಕಡಾ 30ರಷ್ಟು ದೃಷ್ಟಿಗೆ ಲೆನ್ಸ್ ಬಳಸಬೇಕಾಗುತ್ತದೆ. ಏನೂ ತೊಂದರೆ ಇಲ್ಲ. ಘಟನೆ ಆದ ಮೇಲೂ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ಎಂದು ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!