Sunday , February 17 2019
ಕೇಳ್ರಪ್ಪೋ ಕೇಳಿ
Home / Film News / `ಕಬಾಲಿ’ಯ ಡಾನ್ ರೂಪುಗೊಂಡದ್ದು ಹೇಗೆ ಗೊತ್ತಾ…? : ಅಜಿತ್ ಬಿಲ್ಲಾಗಿಂತ ರಜನಿ ಕಬಾಲಿ ಹೇಗೆ ಡಿಫ್ರೆಂಟ್…?

`ಕಬಾಲಿ’ಯ ಡಾನ್ ರೂಪುಗೊಂಡದ್ದು ಹೇಗೆ ಗೊತ್ತಾ…? : ಅಜಿತ್ ಬಿಲ್ಲಾಗಿಂತ ರಜನಿ ಕಬಾಲಿ ಹೇಗೆ ಡಿಫ್ರೆಂಟ್…?

ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕಾಲಿವುಡ್‍ನ ಕಾಸ್ಟ್ಯೂಮ್ ಡಿಸೈನರ್ ಅನು ವರ್ದನ್‍ಗೆ ನಿರ್ದೇಶಕ ಪಾ ರಂಜಿತ್ ಕರೆ ಮಾಡಿದಾಗ ಖುಷಿಯಿಂದ ಅನು ಕಾಲು ನೆಲದ ಮೇಲೆ ಇರಲಿಲ್ಲ. ದಕ್ಷಿಣ ಭಾರತದ ಇನ್ನೋರ್ವ ಪ್ರಸಿದ್ಧ ನಟ ಅಜಿತ್ ಕುಮಾರ್ ಅಭಿನಯದ `ಬಿಲ್ಲಾ’ ಚಿತ್ರದಲ್ಲೂ ಇವರು ಕೆಲಸ ಮಾಡಿದ್ದರು. ಅದೇ ಖುಷಿಯಲ್ಲಿ ಇದ್ದ ಅನುಗೆ ರಜನಿಕಾಂತ್‍ಗೆ ಕಾಸ್ಟ್ಯೂಮ್ ಡಿಸೈನ್ ಮಾಡಬೇಕೆಂಬ ಕರೆ ಬಂದಾಗ ಆಕಾಶಕ್ಕೆ ಮೂರೇ ಗೇಣು.
kabali 3`ಕಬಾಲಿ’ ಚಿತ್ರದಲ್ಲಿ ರಜನಿ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅನುಗೂ ಚಾಲೆಂಜಿಂಗ್ ಟಾಸ್ಕ್. ಸ್ಟೈಲ್ ಕಿಂಗ್ ಅನ್ನು ಇನ್ನಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವಂತೆ ಮಾಡುವುದು ಅನುಗೂ ದೊಡ್ಡ ಸವಾಲು. 1998ರಿಂದ ಸಿನೆಮಾ ಕ್ಷೇತ್ರದಲ್ಲಿರುವ ಅನು ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರವನ್ನು ಮಾಡಿದ್ದಾರೆ.
kabali 2ಅನು ಹೇಳಿದ್ದು : ಇದು ನನ್ನ ವೃತ್ತಿ ಜೀವನದಲ್ಲಿ ಬಹುದೊಡ್ಡ ಸಿನೆಮಾ. ಪಾ ರಂಜಿತ್ ಕಬಾಲಿ ಚಿತ್ರದ ಕತೆ ವಿವರಿಸುವಲ್ಲಿಂದ ಈ ಚಿತ್ರದಲ್ಲಿ ನನ್ನ ಜರ್ನಿ ಆರಂಭವಾಗಿತ್ತು. ರಜನಿ ಇಲ್ಲಿ ಎರಡು ಡಿಫ್ರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಡಾನ್ ಮತ್ತೊಂದು 80ರ ದಶಕದ ಯುವ ರಜನಿ. ಹೀಗಾಗಿ, ನಾನು ಎರಡು ಲುಕ್‍ಗಳನ್ನು ಡಿಸೈನ್ ಮಾಡಿದ್ದೆ. ಒಂದು ಈಗ ಇರುವ ರಜನಿ ಮತ್ತೊಂದು ಯುವ ರಜನಿ. ನಿರ್ದೇಶಕ ರಂಜಿತ್ ರಜನಿ ಪಾತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಹೀಗಾಗಿ, ಕಲಾ ನಿರ್ದೇಶಕ ರಾಮಲಿಂಗಂ ಮತ್ತು ಮೇಕಪ್ ಆರ್ಟಿಸ್ಟ್ ಬಾನು ಎಲ್ಲಾ ಸೇರಿ ನಾವು ರಜನಿ ಪಾತ್ರದ ಬಗ್ಗೆ ನಾನು ಚರ್ಚೆ ಮಾಡಿದೆವು. 80ರ ದಶಕದ ರಜನಿ ಲುಕ್‍ಗೆ ನಾವು ಜಾಸ್ತಿಯಾಗಿ ಶರ್ಟ್‍ಗೆ ಪ್ರಿಂಟೆಡ್ ಮೆಟೀರಿಯಲ್‍ಗಳನ್ನು ಬಳಸಿಕೊಂಡಿದ್ದೆವು. ಚೆನ್ನೈನಲ್ಲಿರುವ ಹಲವು ಅಂಗಡಿಗಳಲ್ಲಿ ಇದ್ದ ಹಳೇ ಸ್ಟಾಕ್‍ಗಳಿಗಾಗಿ ಹುಡುಕಾಡಿ ನಾನು ಅದನ್ನು ತಂದಿದ್ದೆ. ಉಳಿದ ಒಂದಷ್ಟನ್ನು ಮಲೇಷ್ಯಾದಿಂದ ತಂದಿದ್ದೆವು. ರಜನಿಗೆ 80ರ ದಶಕದ ಲುಕ್ ಕೊಡುವುದಕ್ಕೆ ಕಲಾ ನಿರ್ದೇಶಕ ರಾಮಲಿಂಗಮ್ ತುಂಬಾ ಸಹಾಯ ಮಾಡಿದರು. ಎಲ್ಲವನ್ನೂ ಅಂತಿಮ ನಿರ್ಧಾರ ಮಾಡುವ ಮೊದಲು ನಾವು ಟ್ರೇಯಲ್ ರನ್ ಮಾಡಿಕೊಂಡಿದ್ದೆವು. ರಜನಿಕಾಂತ್ ಅವರು ಕೂಡಾ ತುಂಬಾ ಸಹಕಾರ ನೀಡಿದರು. ಅವರು ಕಾಸ್ಟ್ಯೂಮ್‍ಗಳ ಫಿಟ್ಟಿಂಗ್ ಬಗ್ಗೆ ಮಾತ್ರ ನಮಗೆ ಹೇಳಿದ್ದರು. ಬಾಕಿ ಉಳಿದಂತೆ ಎಲ್ಲಾ ಸ್ವಾತಂತ್ರ್ಯವನ್ನೂ ನಮಗೆ ಕೊಟ್ಟಿದ್ದರು. ಈ ಕಾಸ್ಟ್ಯೂಮ್ ಧರಿಸಿದ ತಕ್ಷಣ ರಜನಿ ಸಾರ್ ಹೇಗೆ ಪಾತ್ರವಾಗಿ ಬದಲಾಗುತ್ತಿದ್ದರು ಎಂಬುದೇ ಆಶ್ಚರ್ಯ. ಅರೆ ಕ್ಷಣದಲ್ಲಿ ಅವರು ಪಾತ್ರದೊಳಗೆ ಪ್ರವೇಶ ಮಾಡುತ್ತಿದ್ದರು. ಇದು ನನ್ನಂತಹ ಕಾಸ್ಟ್ಯೂಮ್ ಡಿಸೈನರ್‍ಗೆ ಬಹಳ ದೊಡ್ಡ ಸ್ಫೂರ್ತಿದಾಯಕವಾಗಿತ್ತು. ರಜನಿಗೆ ಬಳಸಿದ್ದ ಎಲ್ಲಾ ವಸ್ತುಗಳನ್ನು ವಿದೇಶದಿಂದ ತರಲಾಗಿದೆ. ಇನ್ನು, 50 ಸೂಟ್‍ಗಳನ್ನು ತರಿಸಲಾಗಿತ್ತು. ಒಂದೊಂದು ಲುಕ್‍ಗೆ 7 ರಂತೆ ಸೂಟ್‍ಗಳನ್ನು ತರಿಸಿಕೊಳ್ಳಲಾಗಿತ್ತು. ವುಲ್ಲನ್, ಕಾಟನ್ ಮತ್ತು ನ್ಯಾಚುರಲ್ ಫ್ಯಾಬ್ರಿಕ್‍ಗಳನ್ನು ಇಲ್ಲಿ ಬಳಸಲಾಗಿತ್ತು. ಒಂದು ಸನ್ ಗ್ಲಾಸ್‍ಗಾಗಿ ಮೂವತ್ತು ಸನ್‍ಗ್ಲಾಸ್‍ಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ, ಒಂದು ದಿನ ಅವರೇ ಸೆಟ್‍ನಲ್ಲಿ ಬಳಸಿಕೊಳ್ಳುತ್ತಿದ್ದ ಸನ್‍ಗ್ಲಾಸ್‍ಗಳನ್ನು ನೋಡಿದೆವು. ಅದು ಚೆನ್ನಾಗಿತ್ತು. ಹೀಗಾಗಿ, ಹಲವು ಸನ್ನಿವೇಶಗಳಲ್ಲಿ ರಜನಿ ಅವರ ಸ್ವಂತ ಸನ್‍ಗ್ಲಾಸನ್ನೇ ಬಳಸಿಕೊಳ್ಳಲಾಗಿದೆ. ರಜನಿ ಸಾರ್ ನಮ್ಮ ಎಲ್ಲಾ ಪ್ರಯತ್ನಕ್ಕೆ ಸಹಕಾರ ನೀಡುತ್ತಿದ್ದರು. ಆದರೆ, ನಮಗೊಂದು ಟೆನ್ಶನ್ ಇತ್ತು. ಯಾಕೆಂದರೆ, ರಜನಿ ಸಾರ್ ಸ್ಕ್ರೀನ್‍ನಲ್ಲಿ ಏನು ಮಾಡಿದರೂ ಅದೊಂದು ಟ್ರೆಂಡ್ ಆಗುತ್ತದೆ. ಇದೇ ಸನ್ನಿವೇಶವನ್ನು ನಾನು ಅಜಿತ್ ಅವರೊಂದಿಗೆ ಬಿಲ್ಲಾ ಮತ್ತು ವೇದಾಲಂ ಚಿತ್ರ ಮಾಡುವಾಗ ಎದುರಿಸಿದ್ದೆ. ಹೀಗಾಗಿ, ಕಬಾಲಿಯನ್ನು ರೂಪಿಸುವಾಗ ನಾನು ಇನ್ನಷ್ಟು ಜಾಗರೂಕತೆ ವಹಿಸಬೇಕಾಗಿತ್ತು.

Image courtesy: iflickz.com

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!