Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೆ ಬರುತ್ತಿದೆ `ಖಳ್ ನಾಯಕ್’ : ಖಳ್ ನಾಯಕ್ ರಿಟನ್ಸ್‍ನಲ್ಲಿ ಸಂಜು ಖದರ್

ಮತ್ತೆ ಬರುತ್ತಿದೆ `ಖಳ್ ನಾಯಕ್’ : ಖಳ್ ನಾಯಕ್ ರಿಟನ್ಸ್‍ನಲ್ಲಿ ಸಂಜು ಖದರ್

ಮುಂಬೈ : ಸಂಜಯ್ ದತ್ ಮತ್ತೆ `ಖಳ್ ನಾಯಕ್’ ಪಾತ್ರದಲ್ಲಿ ಮಿಂಚಲಿದ್ದಾರೆ. ಅದೇ ತನ್ನ ಹಳೇ ಬಾಲು ಬಲ್‍ರಾಮ್ ಖದರ್‍ನಲ್ಲಿ ತೆರೆಗೆ ಬರಲು ದತ್ ಸಜ್ಜಾಗಿದ್ದಾರೆ. 1993ರ ಬ್ಲಾಕ್ ಬ್ಲಾಸ್ಟರ್ ಮೂವಿ `ಖಳ್ ನಾಯಕ್’ನ ಮತ್ತೊಂದು ಅವತರಣಿಕೆ `ಖಳ್ ನಾಯಕ್ ರಿಟನ್ಸ್’ ಸಿದ್ಧತೆಗಳು ನಡೆಯುತ್ತಿದೆ.

1993ರ `ಖಳ್‍ನಾಯಕ್’ ಚಿತ್ರದಲ್ಲಿ ಸಂಜತ್ ದತ್ ಡಾನ್ ಪಾತ್ರವನ್ನು ನಿರ್ವಹಿಸಿದ್ದರು. ಮಾಧುರಿ ದೀಕ್ಷಿತ್ ದತ್‍ಗೆ ಜೊತೆಯಾಗಿದ್ದರು. ಈ ಚಿತ್ರ ಆ ವರ್ಷದ ಬಹುದೊಡ್ಡ ಹಿಟ್ ಚಿತ್ರವಾಗಿತ್ತು. ಇದೀಗ ಈ ಚಿತ್ರದ ಮುಂದುವರಿದ ಭಾಗವನ್ನು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಸುಭಾಷ್ ಗಾಯ್ ಅವರ ಮುಕ್ತ ಆಟ್ರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಡಾನ್ ಬಾಲು ಬಲ್‍ರಾಮ್ 20 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದ ಬಳಿಕ ನಡೆಯುವ ಘಟನೆಗಳೇ ಚಿತ್ರದ ಕಥೆ. ಈ ಚಿತ್ರದ ಸ್ಕ್ರಿಪ್ಟ್ ವರ್ಕ್‍ಗಳು ಫೈನಲ್ ಸ್ಟೇಜ್‍ನಲ್ಲಿದ್ದು, ಇದು ಅಂತಿಮವಾದ ತಕ್ಷಣ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸುಭಾಷ್ ಗಾಯ್ ತಿಳಿಸಿದ್ದಾರೆ. ಹೊಸ ಡೈರೆಕ್ಟರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!