Friday , April 20 2018
Home / Sandalwood / `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್…?

`ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್…?

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಸೂಪರ್‍ಹಿಟ್ ಚಿತ್ರ `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಬೇರೆ ಬೇರೆ ಚಿತ್ರರಂಗದವರು ಈ ಚಿತ್ರವನ್ನು ತಮ್ಮ ಭಾಷೆಯಲ್ಲಿ ಮಾಡಲು ಉತ್ಸುಕರಾಗಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ಮಾಡಲು ನಿರ್ಮಾಪಕ ಬೋನಿ ಕಪೂರ್ ಮನಸ್ಸು ಮಾಡಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅನಂತ್‍ನಾಗ್ ನಿರ್ವಹಿಸಿದ ಪಾತ್ರಕ್ಕೆ ಅನುಪಮ್ ಖೇರ್ ಮತ್ತು ಶಾಹಿದ್ ಕಪೂರ್‍ರನ್ನು ಹಾಕಲು ಬೋನಿ ನಿರ್ಧರಿಸಿದ್ದಾರಂತೆ. ಈ ನಡುವೆ, ಇದೇ ಚಿತ್ರವನ್ನು ಹಿಂದಿಯಲ್ಲಿ ಮಾಡಲು ಮತ್ತಿಬ್ಬರು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಕಾಶ್ ರೈ ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರವನ್ನು ಮಾಡಲು ರೈಟ್ಸ್ ಪಡೆದಿದ್ದಾರೆ. ರೈ ಹಿಂದಿಗೂ ಇದರ ರಿಮೇಕ್ ರೈಟ್ಸ್ ಪಡೆಯಲು ಮನಸ್ಸು ಮಾಡಿದ್ದಾರಂತೆ. ಅಲ್ಲದೆ, ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ನಟಿಸಲು ಒಪ್ಪಿದರೆ ಈ ಚಿತ್ರವನ್ನು ಹಿಂದಿಯಲ್ಲಿ ಮಾಡುವುದಾಗಿ ಪ್ರಕಾಶ್ ಹೇಳ್ತಿದ್ದಾರಂತೆ. ಈ ನಡುವೆ, ಕಪೂರ್ ಮತ್ತು ರೈ ಜೊತೆಗೆ ತಮಿಳಿನ ಡೈರೆಕ್ಟರ್ ಎ.ಆರ್.ಮುರುಗದಾಸ್ ಕೂಡಾ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಇದೆ.

ಈ ನಡುವೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಹೇಮಂತ್ ರಾವ್, ಸಿನೆಮಾ ರೈಟ್ಸ್ ಪಡೆಯಲು ಹಲವರು ಮುಂದೆ ಬಂದಿದ್ದು ನಿಜ. ಆದರೆ, ನಮ್ಮ ನಡುವೆ ಯಾವೆಲ್ಲಾ ಮಾತುಕತೆ ನಡೆದಿದೆ. ಬಂದಿರುವ ನಿರ್ಮಾಪಕರು ಯಾರು ಎಂಬುದು ಸದ್ಯಕ್ಕೆ ಬಹಿರಂಗಪಡಿಸುವುದು ಸರಿ ಅಲ್ಲ. ಆದರೆ, ದೊಡ್ಡ ಮಟ್ಟದ ಜನರಿಗೆ ಚಿತ್ರ ತಲುಪುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ ಎಂದು ಪ್ರಖ್ಯಾತ ಆಂಗ್ಲ ಪತ್ರಿಕೆ `ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!