Friday , April 20 2018
Home / Film News / ರಜನಿ ಅಭಿಮಾನಿಗಳ ಕಾತರದ ಕ್ಷಣ ಹತ್ತಿರ : ಜುಲೈ 22ಕ್ಕೆ ಕಬಾಲಿ ರಿಲೀಸ್

ರಜನಿ ಅಭಿಮಾನಿಗಳ ಕಾತರದ ಕ್ಷಣ ಹತ್ತಿರ : ಜುಲೈ 22ಕ್ಕೆ ಕಬಾಲಿ ರಿಲೀಸ್

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಕ್ಷಣ ಹತ್ತಿರವಾಗುತ್ತಿದೆ. ರಜನಿಯ ಬಹುನಿರೀಕ್ಷಿತ `ಕಬಾಲಿ’ ಚಿತ್ರ ಇದೇ ತಿಂಗಳ 22ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ನಿನ್ನೆ ಕಬಾಲಿಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಬಾಲಿಗೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಮೂರು ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ತಮಿಳು, ತೆಲುಗು ಮತ್ತು ಹಿಂದೆ ಭಾಷೆಯಲ್ಲಿ ಕಬಾಲಿ ಸಿದ್ಧವಾಗಿದೆ. ರಜನಿಕಾಂತ್ ಇಲ್ಲಿ ಮಲೇಷ್ಯಾದಲ್ಲಿರುವ ಡಾನ್‍ನ ಪಾತ್ರ ಮಾಡಿದ್ದಾರೆ. ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಇನ್ನು, ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿರುವುದರಿಂದ ತಮಿಳುನಾಡಿನಲ್ಲಿ ಈ ಚಿತ್ರಕ್ಕೆ ಮನೋರಂಜನಾ ತೆರಿಗೆ ವಿನಾಯಿತಿ ಸಿಗಲಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!