Saturday , January 19 2019
ಕೇಳ್ರಪ್ಪೋ ಕೇಳಿ
Home / News NOW / ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಓವೈಸಿ ಪಾರ್ಟಿ ಸ್ಪರ್ಧಿಸುವಂತಿಲ್ಲ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಓವೈಸಿ ಪಾರ್ಟಿ ಸ್ಪರ್ಧಿಸುವಂತಿಲ್ಲ

ಮುಂಬೈ : ಹೈದರಾಬಾದ್ ಮೂಲಕ ನಾಯಕ ಅಸಾದುದ್ದೀನ್ ಓವೈಸಿಯ ಪಕ್ಷ ಎಐಎಂಐಎಂಗೆ ಮಹಾರಾಷ್ಟ್ರದಲ್ಲಿ ಭಾರೀ ಹಿನ್ನಡೆಯಾಗಿದೆ. ಓವೈಸಿ ಪಕ್ಷ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮಹಾರಾಷ್ಟ್ರದ ಚುನಾವಣಾ ಆಯೋಗ ಹೇಳಿದೆ. ಪಕ್ಷದ ಸೂಕ್ತ ದಾಖಲಾತಿಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಆದೇಶ ನೀಡಿದೆ.

`ಆದಾಯ ತೆರಿಗೆ ಪಾವತಿ, ಆಡಿಟ್ ರಿಪೋರ್ಟ್ ಕೊಡಿ ಎಂದು ನಾವು ಹಲವು ಬಾರಿ ನೊಟೀಸ್ ನೀಡಿದ್ದೆವು. ಆದರೆ, ಈ ಯಾವ ದಾಖಲೆಯನ್ನೂ ಅವರು ನೀಡಿರಲಿಲ್ಲ. ಹೀಗಾಗಿ, ಈ ಪಕ್ಷದ ಮಾನ್ಯತೆಯನ್ನು ರದ್ದು ಮಾಡಲಾಗಿದೆ’ ಎಂದು ಆಯೋಗದ ವಕ್ತಾರರು ತಿಳಿಸಿದ್ದಾರೆ. ಇನ್ನು ಎಂಐಎಂ ಜೊತೆಗೆ 191 ಪಕ್ಷಗಳ ಮಾನ್ಯತೆಗಳನ್ನೂ ರದ್ದು ಮಾಡಲಾಗಿದೆ.

ಇದೇ ವೇಳೆ, ಆಯೋಗದ ಕ್ರಮಕ್ಕೆ ಎಐಎಂಐಎಂ ಪಕ್ಷದ ಶಾಸಕ ಇಮ್ತಿಯಾಜ್ ಜಲಾಲ್ ಕಿಡಿಕಾರಿದ್ದಾರೆ. ಇದು ಆಘಾತಕಾರಿ ಸುದ್ದಿ. ಆಯೋಗಕ್ಕೆ ನಾವು ಎಲ್ಲಾ ದಾಖಲೆ ನೀಡಿದ್ದೇವೆ. ಮೂರು ವರ್ಷದ ಆದಾಯ ತೆರಿಗೆ ಪಾವತಿ ದಾಖಲೆ ಕೊಟ್ಟಿದ್ದೇವೆ. ಅಲ್ಲದೆ, ಇತರ ದಾಖಲೆಗಳನ್ನೂ ನೀಡಿದ್ದೇವೆ. ಆಯೋಗದ ಈ ನಡೆ ಹಿಂದೆ ರಾಜಕೀಯ ಒತ್ತಡ ಇದೆ ಎಂಬ ಸಂಶಯ ನಮ್ಮದು ಎಂದು ಅವರು ಆರೋಪಿಸಿದ್ದಾರೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎರಡು ಸೀಟು ಗೆದ್ದಿದ್ದ ಎಐಎಂಐಎಂ ಮುಂದಿನ ವರ್ಷ ನಡೆಯುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಮೇಲೆ ಕಣ್ಣಿಟ್ಟಿತ್ತು. ಈ ಮೂಲಕ ಮಹಾರಾಷ್ಟ್ರದಲ್ಲಿ ಭದ್ರವಾಗಿ ಬೇರೂರಲು ಸಿದ್ಧತೆ ಮಾಡಿತ್ತು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!