Monday , January 21 2019
ಕೇಳ್ರಪ್ಪೋ ಕೇಳಿ
Home / Gulf News / ಎಮರೈಟ್ಸ್ ಮುಡಿಗೆ ವಿಶ್ವದ ಬೆಸ್ಟ್ ಏರ್‍ಲೈನ್ಸ್ ಪ್ರಶಸ್ತಿ

ಎಮರೈಟ್ಸ್ ಮುಡಿಗೆ ವಿಶ್ವದ ಬೆಸ್ಟ್ ಏರ್‍ಲೈನ್ಸ್ ಪ್ರಶಸ್ತಿ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ದುಬೈ : ಸಂಯುಕ್ತ ಅರಬ್ ರಾಷ್ಟ್ರಗಳ ಎಮರೈಟ್ಸ್ ವಿಶ್ವದ ಉತ್ತಮ ವಿಮಾನಯಾನ ಸಂಸ್ಥೆ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಸ್ಕೈಟ್ರಾಕ್ಸ್ ವಲ್ರ್ಡ್ ಏರ್‍ಲೈನ್ಸ್ ಅವಾರ್ಡ್ 2016 ಪ್ರಶಸ್ತಿ ಎಮರೈಟ್ಸ್ ಮುಡಿಗೇರಿದೆ. ಜೊತೆಗೆ ವಲ್ಡ್ರ್ಸ್ ಬೆಸ್ಟ್ ಇನ್‍ಫ್ಲೈಟ್ ಎಂಟಟೈನ್‍ಮೆಂಟ್ ಪ್ರಶಸ್ತಿಯನ್ನೂ ಸತತ 12 ವರ್ಷದಿಂದ ಈ ಸಂಸ್ಥೆ ತನ್ನದಾಗಿಸಿಕೊಂಡಿದೆ. ದೊಡ್ಡ ಪ್ರಮಾಣದ ಪ್ರಯಾಣಿಕರ ತೃಪ್ತಿದಾಯದ ಪ್ರತಿಕ್ರಿಯೆಯ ಸರ್ವೆಯ ಆಧಾರದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

280 ಏರ್‍ಲೈನ್ಸ್ ಸಂಸ್ಥೆಯನ್ನು ಹಿಂದಿಕ್ಕಿ ಎಮರೈಟ್ಸ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಒಟ್ಟು 41 ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಬಳಿಕವೇ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಸತತ ನಾಲ್ಕನೇ ಬಾರಿಗೆ ಎಮರೈಟ್ಸ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಖುಷಿಯಲ್ಲಿದೆ. ಕಳೆದ 15 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!