Thursday , April 19 2018
Home / Film News / Bollywood / ಸಲ್ಮಾನ್ ಖಾನ್ ವಿರುದ್ಧ ಅನುಷ್ಕಾ ಶರ್ಮಾ ಗರಂ

ಸಲ್ಮಾನ್ ಖಾನ್ ವಿರುದ್ಧ ಅನುಷ್ಕಾ ಶರ್ಮಾ ಗರಂ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ನಟಿ ಅನುಷ್ಕಾ ಶರ್ಮಾ ಗರಂ ಆಗಿದ್ದಾರೆ. ಸುಲ್ತಾನ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಅನುಷ್ಕಾ ಈಗ ಸಲ್ಮಾನ್ ವಿರುದ್ಧ ಕೋಪಗೊಂಡಿದ್ದಾರೆ. ಅನುಷ್ಕಾ ಈ ಕೋಪಕ್ಕೆ ಕಾರಣ ಸಲ್ಮಾನ್ ಅವರ ರೇಪ್ ಕುರಿತ ಹೇಳಿಕೆ. ಅತ್ಯಾಚಾರದ ಬಗ್ಗೆ ಸಲ್ಮಾನ್ ನೀಡಿದ್ದ ಹೇಳಿಕೆ ನನಗೆ ಅಚ್ಚರಿ ತಂದಿದೆ ಎಂದು ಅನುಷ್ಕಾ ಹೇಳಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಾದ ನಾವು ಮಾತನಾಡುವಾಗ ಎಚ್ಚರ ವಹಿಸಬೇಕು ಎಂದೂ ಅನುಷ್ಕಾ ಹೇಳಿದ್ದಾರೆ. ಸಲ್ಮಾನ್ ಈ ಹೇಳಿಕೆ ಸಂವೇದನ ರಹಿತವಾಗಿದ್ದು ಎಂಬುದು ಅನುಷ್ಕಾ ಮಾತು.

ಸುಲ್ತಾನ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಲ್ಮಾನ್ ನೀಡಿದ್ದ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಶೂಟಿಂಗ್ ಆದ ಬಳಿಕ ನನ್ನ ಸ್ಥಿತಿ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿತ್ತು ಎಂದು ಸಲ್ಮಾನ್ ಹೇಳಿದ್ದರು. ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಮಹಿಳಾ ಆಯೋಗ ನೊಟೀಸ್ ಕೂಡಾ ನೀಡಿತ್ತು. ಆದರೂ ಸಲ್ಮಾನ್ ಕ್ಷಮೆ ಕೇಳಿರಲಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!