Monday , October 22 2018
ಕೇಳ್ರಪ್ಪೋ ಕೇಳಿ
Home / Gulf News / ಮೂರು ಮಕ್ಕಳ ಪ್ರಾಣ ಉಳಿಸಿದ ಆಸ್ಪತ್ರೆ ಸಿಬ್ಬಂದಿ

ಮೂರು ಮಕ್ಕಳ ಪ್ರಾಣ ಉಳಿಸಿದ ಆಸ್ಪತ್ರೆ ಸಿಬ್ಬಂದಿ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಶಾರ್ಜಾ : ಅಲ್ ಖಾಸಿಮಿ ಆಸ್ಪತ್ರೆಯ ಹಿರಿಯ ಸಿಬ್ಬಂದಿಯೊಬ್ಬರು ಮೂರು ಮಕ್ಕಳ ಪ್ರಾಣವನ್ನು ಉಳಿಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಎಲ್ಲಿಗೋ ಹೋಗಿದ್ದ. 2 ಮತ್ತು 3 ವರ್ಷದ ಇಬ್ಬರು ಹೆಣ್ಮಕ್ಕಳು ಮತ್ತು ಏಳು ವರ್ಷದ ಇವರ ಅಕ್ಕ ಕಾರಿನಲ್ಲೇ ಇದ್ದರು. ಆದರೆ, ಏರುತ್ತಿದ್ದ ಬಿಸಿಲಿನ ಧಗೆಯಿಂದ ಕಾರಿನಲ್ಲಿ ಮಕ್ಕಳು ಸಂಕಷ್ಟ ಅನುಭವಿಸಿದ್ದರು. ಒಂದು ಕಡೆ, ಏರುತ್ತಿರುವ ಬಿಸಿಲಿನ ಧಗೆ ಮತ್ತೊಂದು ಕಡೆ ಯಾರೂ ಇಲ್ಲದ ಭಯದಲ್ಲಿ ಈ ಮಕ್ಕಳು ಕಾರಿನಲ್ಲೇ ಅಳುತ್ತಿದ್ದರು.

ಇದನ್ನು ನೋಡಿದ ನಯೀಮಾ ಅಲ್ ನಖಿ ಎಂಬ ಹಿರಿಯ ಸಿಬ್ಬಂದಿ ಮಕ್ಕಳ ಸಂಕಷ್ಟ ಪರಿಹರಿಸಲು ಧಾವಿಸಿದರು. ಆಫೀಸ್ ಬಾಯ್ ಜೊತೆ ಬಂದ ನಯೀಮಾ ಮೂರು ಮಕ್ಕಳನ್ನು ರಕ್ಷಿಸಿದ್ದಾರೆ. ತಕ್ಷಣ ಅವರಿಗೆ ನೀರೆಲ್ಲಾ ಕೊಟ್ಟು, ಏಸಿ ರೂಮ್‍ನಲ್ಲಿ ಕುಳಿತುಕೊಳ್ಳಿಸಿದ್ದಾರೆ. ನೆತ್ತಿ ಸುಡುತ್ತಿದ್ದ ಈ ಬಿಸಿಲಿನಲ್ಲಿ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಸಕಾಲದಲ್ಲಿ ನಯೀಮಾ ಬಂದಿದ್ದಾರೆ. ಇಲ್ಲದಿದ್ದರೆ ದುರಂತ ನಡೆಯುತ್ತಿತ್ತು. ಯಾಕೆಂದರೆ, ಅಷ್ಟು ಅಗಾಧ ಪ್ರಮಾಣದಲ್ಲಿ ಬಿಸಿಲಿನ ಬೇಗೆ ಇತ್ತು.

ಇನ್ನು, ಮಕ್ಕಳನ್ನು ಈ ರೀತಿ ಬಿಟ್ಟು ಹೋಗಿದ್ದ ತಂದೆಗೆ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!