Tuesday , February 19 2019
ಕೇಳ್ರಪ್ಪೋ ಕೇಳಿ
Home / News NOW / ಬೀರ್ ಕುಡಿದಿದ್ದಕ್ಕೆ ಮಾಜಿ ಎಂಎಲ್‍ಎ ಅರೆಸ್ಟ್…! : ಪಕ್ಷದಿಂದಲೂ ಅಮಾನತು…!

ಬೀರ್ ಕುಡಿದಿದ್ದಕ್ಕೆ ಮಾಜಿ ಎಂಎಲ್‍ಎ ಅರೆಸ್ಟ್…! : ಪಕ್ಷದಿಂದಲೂ ಅಮಾನತು…!

ಪಾಟ್ನಾ : ಜನತಾದಳ ಸಂಯುಕ್ತ ಪಕ್ಷದ ಮಾಜಿ ಶಾಸಕ ಲಲನ್ ರಾಮ್‍ರನ್ನು ಬಿಹಾರದಲ್ಲಿ ಅರೆಸ್ಟ್ ಮಾಡಲಾಗಿದೆ. ಜೊತೆಗೆ, ಪಕ್ಷದಿಂದಲೂ ಅಮಾನತು ಮಾಡಲಾಗಿದೆ. ಕಾರಣ, ಕ್ಯಾಮೆರಾದ ಎದುರು ಬೀರ್ ಕುಡಿದದ್ದದ್ದು ಮತ್ತು ಟೈಟ್ ಆಗಿ ತಮ್ಮದೇ ಪಕ್ಷದ ನಾಯಕ ಮುಖ್ಯಮಂತ್ರಿಯನ್ನು ಬಾಯಿಗೆ ಬಂದಂತೆ ಬೈದದ್ದು…! ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯವನ್ನು ನಿಷೇಧ ಮಾಡಿದ್ದಾರೆ. ಇದೇ ಸಿಟ್ಟಿನಲ್ಲಿ ಲಲನ್ ರಾಮ್ ಕುಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
lalan-ram
ಅಬಕಾರಿ ಮತ್ತು ಪೊಲೀಸರ ಕಾರ್ಯಾಚರಣೆಯಲ್ಲಿ ಲಲನ್ ರಾಮ್‍ರನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಅಂಬ ಪೊಲೀಸ್ ಠಾಣಾ ವ್ಯಾಪ್ತಿಯ ಔರಂಗಾಬಾದ್‍ನಲ್ಲಿ ಇವರನ್ನು ಅರೆಸ್ಟ್ ಮಾಡಲಾಗಿದೆ. ಕುಡಿದ ಬಳಿಕ ಮಾತನಾಡಿದ್ದ ಲಲನ್ ನಿತೀಶ್ ಕುಮಾರ್ ಏನೂ ಮಾಡಿದರೂ ಯಾರೂ ಅವರನ್ನು ಅನುಸರಿಸಬೇಡಿ ಎಂದು ಹೇಳಿದ್ದರು. ಈ ವೀಡಿಯೋ ವಿವಿಧ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ವೀಡಿಯೋದ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ. ಇವರ ಬಂಧನದ ಬಳಿಕ ಜೆಡಿಯು ಲಲನ್‍ರನ್ನು ಪಕ್ಷದಿಂದಲೂ ಅಮಾನತು ಮಾಡಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!