ಬೆಂಗಳೂರು : ಸ್ಯಾಂಡಲ್ವುಡ್ನ ಸೂಪರ್ಹಿಟ್ ಚಿತ್ರ `ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಅನ್ನು ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರೈ ಪಡೆದಿದ್ದಾರೆ. ಪ್ರಕಾಶ್ ಈಗಾಗಲೇ ಈ ಚಿತ್ರದ ತಮಿಳು ಮತ್ತು ತೆಲುಗು ರಿಮೇಕ್ ರೈಟ್ಸ್ ಅನ್ನು ಪಡೆದಿದ್ದರು. ಇನ್ನು, ಅಮಿತಾಭ್ ಬಚ್ಚನ್ ನಟಿಸಲು ಒಪ್ಪಿದರೆ ಮಾತ್ರ ಹಿಂದಿಯಲ್ಲಿ ಈ ಚಿತ್ರ ಮಾಡುವುದಾಗಿ ರೈ ಈ ಹಿಂದೆಯೇ ಹೇಳಿದ್ದರು. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅನಂತ್ನಾಗ್ ಈ ಚಿತ್ರದಲ್ಲಿ ನಟಿಸಿದ್ದರು. ಇಲ್ಲಿ ಅನಂತ್ನಾಗ್ ನಿರ್ವಹಿಸಿದ ಪಾತ್ರಕ್ಕೆ ಅಮಿತಾಭ್ ಬಚ್ಚನ್ರನ್ನು ಹಾಕಿಕೊಳ್ಳಲು ಪ್ರಕಾಶ್ರೈ ಉತ್ಸುಕರಾಗಿದ್ದಾರೆ. (`ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್…?)
ಈ ಚಿತ್ರದ ರಿಮೇಕ್ ರೈಟ್ಸ್ಗಾಗಿ ಭಾರೀ ಪೈಪೋಟಿಯೇ ಇತ್ತು. ಬೋನಿ ಕಪೂರ್ ಅವರು ಕೂಡಾ ಈ ಚಿತ್ರದ ರಿಮೇಕ್ ಮಾಡಲು ಭಾರಿ ಮನಸ್ಸು ಮಾಡಿದ್ದರು. ಜೊತೆಗೆ, ತಮಿಳಿನ ಖ್ಯಾತ ನಿರ್ದೇಶಕ ಮುರುಘದಾಸ್ ಕೂಡಾ ಈ ಚಿತ್ರದ ರಿಮೇಕ್ ರೈಟ್ಸ್ ಪಡೆಯಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿತ್ತು.