Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಫ್ರಾನ್ಸ್ ನಲ್ಲಿ ಉಗ್ರರ ಅಟ್ಟಹಾಸ : 80ಕ್ಕೂ ಹೆಚ್ಚು ಜನರ ಸಾವು

ಫ್ರಾನ್ಸ್ ನಲ್ಲಿ ಉಗ್ರರ ಅಟ್ಟಹಾಸ : 80ಕ್ಕೂ ಹೆಚ್ಚು ಜನರ ಸಾವು

ಪ್ಯಾರಿಸ್ : ಫ್ರಾನ್ಸ್ ನಲ್ಲಿ ರಾಷ್ಟ್ರೀಯ ದಿನಾಚರಣೆ ವೇಳೆ ಉಗ್ರರು ರಕ್ತ ಹರಿಸಿದ್ದಾರೆ. ನೀಸ್ ನಗರದಲ್ಲಿ ಸ್ಫೋಟಕ ತುಂಬಿದ ಕಂಟೈನರ್ ಮೂಲಕ ಉಗ್ರರು ದಾಳಿ ಮಾಡಿದ್ದು, ಈ ದಾಳಿಗೆ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಂಭ್ರಮಾಚರಣೆ ನಡೆಸುತ್ತಿದ್ದವರ ಮೇಲೆಯೇ ಉಗ್ರರು ಸ್ಫೋಟಕ ತುಂಬಿದ್ದ ಕಂಟೈನರ್ ಹರಿಸಿದ್ದಾರೆ. ಈ ಘಟನೆಯಲ್ಲಿ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಐಸಿಸ್ ಉಗ್ರರು ಈ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ.
france 5 france 1 france 2 france 4
ಇನ್ನು, ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಜೊತೆಗೆ, ಟ್ರಕ್‍ನಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ನಾಯಕರು ಕಟುವಾಗಿ ಖಂಡಿಸಿದ್ದಾರೆ. ಅಲ್ಲದೆ, ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!