Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ಅಕ್ಷಯ್ ಕುಮಾರ್ ಪುನೀತ್ ರಾಜ್‍ಕುಮಾರ್ ಭೇಟಿ

ಅಕ್ಷಯ್ ಕುಮಾರ್ ಪುನೀತ್ ರಾಜ್‍ಕುಮಾರ್ ಭೇಟಿ

ಚೆನ್ನೈ : ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಚೆನ್ನೈನಲ್ಲಿ ಭೇಟಿಯಾಗಿದ್ದಾರೆ. ಒಬ್ಬರು ಸೂಪರ್‍ಸ್ಟಾರ್‍ಗಳು ಕೆಲಕಾಲ ಮಾತುಕತೆ ನಡೆಸಿದರು.

ಪುನೀತ್ ರಾಜ್‍ಕುಮಾರ್ ಪ್ರೀಮಿಯರ್ ಫುಸ್ಟಾಲ್ ಲೀಗ್‍ನ ಬೆಂಗಳೂರು ಫ್ರಾನ್ಚೈಸಿ ಪಡೆದಿದ್ದಾರೆ. ಇದೇ ಕೆಲಸಕ್ಕೆ ಸಂಬಂಧಿಸಿದಂತೆ ಪುನೀತ್ ಚೆನ್ನೈಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಕೂಡಾ ಚೆನ್ನೈನಲ್ಲಿ ಇದ್ದರು. ರಜನಿಕಾಂತ್ ಅಭಿನಯದ 2.0ದಲ್ಲಿ ಅಕ್ಷಯ್ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‍ಗಾಗಿ ಅಕ್ಕಿ ಚೆನ್ನೈಗೆ ಬಂದಿದ್ದರು. ಈ ಸಂದರ್ಭದಲ್ಲಿ ಉಭಯ ಸ್ಟಾರ್‍ಗಳು ಮಾತುಕತೆ ನಡೆಸಿದರು. ಇದಾದ ಬಳಿಕ ಪುನೀತ್ ತಮ್ಮ ರಾಜಕುಮಾರ್ ಚಿತ್ರದ ಶೂಟಿಂಗ್‍ಗಾಗಿ ಖಾಸಗಿ ವಿಮಾನದಲ್ಲಿ ಮೈಸೂರಿಗೆ ಬಂದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!