Wednesday , January 24 2018
Home / Film News / Coastalwood / ಆಗಸ್ಟ್ 5ಕ್ಕೆ `ದಬಕ್ ದಬಕ್ ಐಸಾ’ ರಿಲೀಸ್
Buy Bitcoin at CEX.IO

ಆಗಸ್ಟ್ 5ಕ್ಕೆ `ದಬಕ್ ದಬಕ್ ಐಸಾ’ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ದಬಕ್ ದಬಕ್ ಐಸಾ’ ಚಿತ್ರ ತೆರೆಗೆ ಬರುವುದಕ್ಕೆ ಸಿದ್ಧತೆ ನಡೆದಿದೆ. ಆಗಸ್ಟ್ 5ಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಚಿತ್ರ ಪರದೆಯನ್ನು ಅಲಂಕರಿಸಲಿದೆ. `ಜಯಕಿರಣ ಫಿಲಂಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಕಾಶ್ ಪಾಂಡೇಶ್ವರ್ ನಿರ್ದೇಶನ ಮಾಡುತ್ತಿದ್ದಾರೆ.
dabak dabak aisa 1ಹಾಸ್ಯದ ಮೂಲಕ ಸಮಾಜಕ್ಕೊಂದು ಸಂದೇಶವನ್ನು ನೀಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆಯಂತೆ. 511 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದ್ದ `ಚಾಲಿಪೋಲಿಲು’ ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ತುಳುನಾಡಿನ ತೆಲಿಕೆದ ಬೊಳ್ಳಿಗಳಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಬೋಜರಾಜ ವಾಮಂಜೂರು ಮತ್ತು ಅರವಿಂದ ಬೋಳಾರ್ ಇಲ್ಲಿ ಪ್ರಮುಖ ಪ್ರಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರ್ ರೈ ಮಂದಾರ ಕೂಡಾ ಇವರಿಗೆ ಜೊತೆಯಾಗಿದ್ದಾರೆ. ಶೀತಲ್ ಇಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

CEX.IO Bitcoin Exchange

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!