Wednesday , January 24 2018
Home / Film News / Bollywood / ರಜನಿಕಾಂತ್ ಜೊತೆ ಸ್ಪರ್ಧಿಸಲು ಇನ್ನೊಂದು ಜನ್ಮವೆತ್ತಿ ಬರಬೇಕು : ಇರ್ಫಾನ್ ಖಾನ್
Buy Bitcoin at CEX.IO

ರಜನಿಕಾಂತ್ ಜೊತೆ ಸ್ಪರ್ಧಿಸಲು ಇನ್ನೊಂದು ಜನ್ಮವೆತ್ತಿ ಬರಬೇಕು : ಇರ್ಫಾನ್ ಖಾನ್

ಮುಂಬೈ : ಸೂಪರ್‍ಸ್ಟಾರ್ ರಜನಿಕಾಂತ್ ಅವರೊಂದಿಗೆ ಸ್ಪರ್ಧಿಸಲು ಇನ್ನೊಂದು ಜನ್ಮವೆತ್ತಿ ಬರಬೇಕು… ಇದು ಬಾಲಿವುಡ್ ನಟ ಇರ್ಫಾನ್ ಖಾನ್ ಮಾತು. ರಜನಿಕಾಂತ್ ಕಬಾಲಿ ಚಿತ್ರ ಇದೇ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಇದೇ ದಿನ ಇರ್ಫಾನ್ ಖಾನ್ ಅಭಿನಯದ `ಮದಾರಿ’ ಚಿತ್ರವೂ ರಿಲೀಸ್ ಆಗುತ್ತಿದೆ. ಹೀಗಾಗಿ, ಬಾಕ್ಸ್ ಆಫೀಸ್‍ನಲ್ಲಿ ಈ ಎರಡು ಚಿತ್ರಗಳ ಕ್ಲಾಶ್ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರ್ಫಾನ್, ರಜನಿಕಾಂತ್‍ರೊಂದಿಗೆ ಯಾವುದೇ ಸ್ಪರ್ಧೆ ಇಲ್ಲ. ದಕ್ಷಿಣ ಭಾರತದ ಈ ಸೂಪರ್‍ಸ್ಟಾರ್‍ರೊಂದಿಗೆ ಸ್ಪರ್ಧೆ ಮಾಡುವುದಕ್ಕೆ ಇನ್ನೊಂದು ಜನ್ಮವನ್ನೇ ಎತ್ತಿ ಬರಬೇಕು ಎಂದು ಹೇಳಿದ್ದಾರೆ.

`ಅವರು ದೊಡ್ಡ ಜನ, ದೊಡ್ಡ ನಟ, ಅವರನ್ನು ವಿಶ್ವದ ಎಲ್ಲರೂ ಬಲ್ಲರು. ನನ್ನನ್ನು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನನ್ನ ಚಿತ್ರ ಅವರೊಂದಿಗೆ ಬರುತ್ತಿದೆ ಅಷ್ಟೇ. ಹಾಕಿದ ಹಣ ಬರುತ್ತದೆ ಎಂಬ ನಿರೀಕ್ಷೆ ನಮಗಿದೆ. ನಾನು ಅವರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಇನ್ನೊಂದು ಜನ್ಮವನ್ನು ಎತ್ತಿ ಬರಬೇಕು’ ಎಂದು ಇರ್ಫಾನ್ ಹೇಳಿದ್ದಾರೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!