Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Mollywood / ಅಮಲಾ ವಿಜಯ್ ದಾಂಪತ್ಯದಲ್ಲಿ ಎಲ್ಲಾ ಸರಿ ಇದ್ಯಾ…?

ಅಮಲಾ ವಿಜಯ್ ದಾಂಪತ್ಯದಲ್ಲಿ ಎಲ್ಲಾ ಸರಿ ಇದ್ಯಾ…?

ತಿರುವನಂತಪುರಂ : ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ವಿಜಯ್ ದಾಂಪತ್ಯದಲ್ಲಿ ಎಲ್ಲಾ ಸರಿ ಇದ್ಯಾ…? ಇಂತಹದ್ದೊಂದು ಪ್ರಶ್ನೆ ಈಗ ಕೇಳಲಾರಂಭಿಸಿದೆ. ಬಹುವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿತ್ತು. ಆದರೆ, ಇದೀಗ ಈ ಜೋಡಿ ನಡುವೆ ಸಣ್ಣ ಜಗಳ ಶುರುವಾಗಿದೆ ಎಂಬುದು ಸುದ್ದಿ. ಗಂಡ ಹೆಂಡತಿ ಎಂದ ಮೇಲೆ ಜಗಳ ಸಾಮಾನ್ಯ ಅಂತ ಆದರೂ ಈ ಜಗಳ ಅಷ್ಟು ಸಾಮಾನ್ಯವಾಗಿ ಕಾಣ್ತಿಲ್ಲ ಎಂಬುದು ಇವರನ್ನು ಬಲ್ಲವರ ಮಾತು.

ಇಬ್ಬರ ನಡುವೆಯೂ ಈಗ ದೊಡ್ಡ ಕಂದಕ ಏರ್ಪಟ್ಟಿದೆ. ಪರಸ್ಪರ ದೂರ ಆಗುವಷ್ಟು ಮಟ್ಟಕ್ಕೆ ಈ ಕಂದಕ ಹೋಗಿದೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಅಮಲಾ ಕೈಯಲ್ಲಿ ಒಂದಷ್ಟು ದೊಡ್ಡ ದೊಡ್ಡ ಪ್ರಾಜೆಕ್ಟ್‍ಗಳೂ ಇವೆ. ಆದರೆ, ಬಹಳ ದಿನಗಳಿಂದ ಈ ದಂಪತಿ ಪಬ್ಲಿಕ್ ಆಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರೆ ಫೋಟೋಗಳು ಕಾಣಿಸುತ್ತಿಲ್ಲ. ಇಬ್ಬರೂ ಇಂದು ಗಾಢ ಮೌನವನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ, ಈ ದಂಪತಿಗಳ ಬಗ್ಗೆ ಎದ್ದಿದ್ದ ಅನುಮಾನದ ಪ್ರಶ್ನೆಗಳು ಕೂಡಾ ಹೆಚ್ಚಾಗಿವೆ.


Video courtesy : Happily Ever After Photography & Films

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!