Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ಕಬಾಲಿ : ಇಲ್ಲಿವೆ ಸೂಪರ್‍ಸ್ಟಾರ್ ಚಿತ್ರದ ಅಪರೂಪದ ಸಂಗತಿಗಳು

ಕಬಾಲಿ : ಇಲ್ಲಿವೆ ಸೂಪರ್‍ಸ್ಟಾರ್ ಚಿತ್ರದ ಅಪರೂಪದ ಸಂಗತಿಗಳು

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಂತೂ ಮೂರು ಗಂಟೆಗೇ ಮೊದಲ ಪ್ರದರ್ಶನ ಆರಂಭವಾಗಿದೆ. ವಿಶ್ವದಾದ್ಯಂತ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದ ರಜನಿ ಕಬಾಲಿಯ ಬಗೆಗಿನ ಅಪರೂಪದ ಸಂಗತಿಗಳು ಇಲ್ಲಿವೆ.

  • ಕಬಾಲಿಯಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿರುವುದರಲ್ಲಿ `ನೆರುಪುಡಾ’ ಹಾಡು ಕೂಡಾ ಒಂದು. ಈ ಹಾಡನ್ನು ಬರೆದದ್ದು ಕೇವಲ 20 ನಿಮಿಷಗಳಲ್ಲಿ…! ಅರುಣರಾಜ ಕಾಮರಾಜ್ ಈ ಹಾಡನ್ನು ಬರೆದಿದ್ದರು.
  • ಕಳೆದ 24 ವರ್ಷಗಳ ಸಿನೆಮಾ ಜೀವನದಲ್ಲಿ ರಜನಿ ಪ್ರತೀ ಚಿತ್ರದಲ್ಲಿ ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಎಸ್‍ಪಿಬಿ ಹಾಡದ ರಜನಿ ಚಿತ್ರ ಬಿಡುಗಡೆಯಾಗಿದೆ.
  • ಸಾಮಾನ್ಯವಾಗಿ ರಜನಿ ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದ ತಂಡದೊಂದಿಗೆಯೇ ಕೆಲಸ ಮಾಡಿದ್ದರು. ಎಲ್ಲಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದ ತಜ್ಞರೇ ರಜನಿ ಚಿತ್ರದಲ್ಲಿ ಇರುತ್ತಿದ್ದರು. ಆದರೆ, ಎರಡು ದಶಕದಲ್ಲಿ ಇದೇ ಮೊದಲ ಬಾರಿಗೆ ಹೊಸ ತಂಡದೊಂದಿಗೆ ರಜನಿ ಕೆಲಸ ಮಾಡಿದ್ದಾರೆ.
  • ನಿರ್ದೇಶಕ ಪಾ ರಂಜಿತ್ ಎರಡು ಸ್ಕ್ರಿಪ್ಟ್‍ಗಳನ್ನು ರಜನಿ ಮತ್ತು ಮಗಳು ಸೌಂದರ್ಯ ರಜನಿಕಾಂತ್‍ಗೆ ತೋರಿಸಿದ್ದರು. ಒಂದು ಈಗಾಗಲೇ ತೆರೆ ಕಂಡಿರುವ ಡಾನ್ ಕತೆ ಮತ್ತೊಂದು ಸೂಪರ್‍ನ್ಯಾಚುರಲ್ ಡ್ರಾಮಾ. ರಜನಿ ಡಾನ್ ಕತೆಯನ್ನೇ ತನ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.
  • ಇದು ನಿಜ ರೌಡಿಯ ಜೀವನ ಕತೆ. ಚೆನ್ನೈನ ಮೈಲಾಪುರದ ಕಬಾಲೀಶ್ವರನ್ ಎಂಬ ಡಾನ್‍ನ ಪಾತ್ರವನ್ನು ರಜನಿ ಇಲ್ಲಿ ನಿರ್ವಹಿಸಿದ್ದಾರೆ.
  • ರಜನಿ ಚಿತ್ರ ಅಂದರೆ ಅವರ ಎಂಟ್ರಿಯೇ ಸೂಪರ್ ಆಗಿರುತ್ತದೆ. ಆದರೆ, ಕಬಾಲಿಯಲ್ಲಿ ರಜನಿ ದರ್ಶನ ಆಗುವುದೇ ಚಿತ್ರ ಶುರುವಾಗಿ 15 ನಿಮಿಷಗಳ ನಂತರ…!

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!