Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಕೋಸ್ಟಲ್‍ವುಡ್‍ನಲ್ಲೂ ಪೈರೆಸಿ ಕಾಟ…! : `ದಬಕ್ ದಬಾ ಐಸಾ’ ಸಿನಿಮಾ ಬಿಡುಗಡೆಗೆ ಮೊದಲೇ ಸೋರಿಕೆ

ಕೋಸ್ಟಲ್‍ವುಡ್‍ನಲ್ಲೂ ಪೈರೆಸಿ ಕಾಟ…! : `ದಬಕ್ ದಬಾ ಐಸಾ’ ಸಿನಿಮಾ ಬಿಡುಗಡೆಗೆ ಮೊದಲೇ ಸೋರಿಕೆ

ಮಂಗಳೂರು : ಸದ್ಯ ಪಾದರಸದಂತೆ ಚುರುಕಾಗಿರುವ ಕೋಸ್ಟಲ್‍ವುಡ್‍ಗೆ ಈಗ ಪೈರೆಸಿ ಕಾಟ ಶುರುವಾಗಿದೆ. ಪೈರೆಸಿ ಎಂಬ ಭೂತ ತುಳು ಸಿನೆಮಾಕ್ಕೂ ವಕ್ಕರಿಸಿದೆ. ಆಗಸ್ಟ್ 5ಕ್ಕೆ ಬಿಡುಗಡೆಯಾಗಬೇಕಾಗಿದ್ದ ಬಹುನಿರೀಕ್ಷಿತ `ದಬಕ್ ದಬಾ ಐಸಾ’ ಚಿತ್ರದ ತುಣುಕುಗಳು ಈಗಾಗಲೇ ಸೋರಿಕೆಯಾಗಿದೆ. ಈ ಕ್ಲಿಪಿಂಗ್ಸ್ ಮೊಬೈಲ್ ಮೂಲಕ ಹರಿದಾಡಲಾರಂಭಿಸಿದೆ. ಸೆನ್ಸಾರ್ ಮಂಡಳಿಗೆ ಕಳುಹಿಸಲಾಗಿದ್ದ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ಸೋರಿಕೆ ಮಾಡಿದ್ದಾರೆ ಎಂಬುದಾಗಿ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಪ್ರಕಾಶ್ ಪಾಂಡೇಶ್ವರ ಅವರ ಆರೋಪ. ಈ ಬಗ್ಗೆ ಕರ್ನಾಟಕ ಫಿಲಂ ಚೇಂಬರ್‍ಗೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಕಾಶ್ ಪಾಂಡೇಶ್ವರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರು ಚಾಲಿಪೋಲಿಲು ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರ 500 ದಿನ ಪ್ರದರ್ಶನ ಕಂಡು ಕೋಸ್ಟಲ್‍ವುಡ್‍ನಲ್ಲಿ ದಾಖಲೆ ಬರೆದಿತ್ತು. ಇನ್ನು, ಚಿತ್ರತಂಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೊಬೈಲ್ ಸೆಂಟರ್, ಸೈಬರ್ ಸೆಂಟರ್‍ಗಳಲ್ಲಿ  ಸಿನಿಮಾವನ್ನು ಡೌನ್ ಲೋಡ್ ಮಾಡಿ ಕೊಡುತ್ತಿರುವ ಮಾಹಿತಿ ಆಧಾರದಲ್ಲಿ ಪೊಲೀಸರು ಅನೇಕ ಕಡೆ ದಾಳಿ ನಡೆಸಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!