Tuesday , February 19 2019
ಕೇಳ್ರಪ್ಪೋ ಕೇಳಿ
Home / Sandalwood / ಕಬಾಲಿ ಟಿಕೆಟ್ ತಂದ ಸಂಕಷ್ಟ : ನಿರ್ಮಾಪಕ ಮುನಿರತ್ನ ವಿರುದ್ಧ ಆಕ್ರೋಶ

ಕಬಾಲಿ ಟಿಕೆಟ್ ತಂದ ಸಂಕಷ್ಟ : ನಿರ್ಮಾಪಕ ಮುನಿರತ್ನ ವಿರುದ್ಧ ಆಕ್ರೋಶ

ಬೆಂಗಳೂರು : ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ರಾಜ್ಯದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ರಜನಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದರೆ, ಬಹುತೇಕರು ಪರಭಾಷಾ ಚಿತ್ರಕ್ಕೆ ಇಷ್ಟೊಂದು ಬೆಂಬಲ ಬೇಕಿತ್ತಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ನಡುವೆ, ನಿರ್ಮಾಪಕ ಮುನಿರತ್ನ ಕಬಾಲಿ ಟಿಕೆಟ್ ವಿಚಾರದಲ್ಲಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
kabali (1)
ರಾಜರಾಜೇಶ್ವರಿ ನಗರದ ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ತಮ್ಮ ಕ್ಷೇತ್ರದ ಜನರಿಗೆ ಹತ್ತು ಲಕ್ಷ ರೂಪಾಯಿಯ ಕಬಾಲಿ ಟಿಕೆಟ್ ತೆಗೆದುಕೊಂಡು ಹಂಚಿದ್ದರು. ಇದು ನಿರ್ಮಾಪಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮುನಿರತ್ನ ಕನ್ನಡ ಚಿತ್ರ ನಿರ್ಮಾಪಕರಾಗಿದ್ದೂ ಕನ್ನಡ ಸಿನೆಮಾಗಳು ಪ್ರಾಮುಖ್ಯತೆ ಕೊಡುತ್ತಿಲ್ಲ. ಇತರ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಲ್ಲದೆ, ಇದರಿಂದ ಸಿಟ್ಟಾದ ನಿರ್ಮಾಪಕರು ಇವತ್ತು ತಮ್ಮ ಸಂಘಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಮುನಿರತ್ನ ನಾನು ಶಾಸಕನಾಗಿ ಈ ಕೆಲಸ ಮಾಡಿದ್ದೀನಿ, ನನ್ನಿಂದ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗಿಲ್ಲ. ಯಾರೇ ಯಾವ ಸಿನಿಮಾದ ಟಿಕೆಟ್ ಕೇಳಿದರೂ ನಾನು ಕೊಡಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ, ಐದು ವರ್ಷದಿಂದ ನಿರ್ಮಾಪಕರ ಸಂಘದ ಚುನಾವಣೆ ನಡೆಯದೇ ಇರುವುದರ ಬಗ್ಗೆಯೂ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಇದೇ ಮೂವತ್ತರ ಒಳಗೆ ನಿರ್ಮಾಪಕರ ಸಂಘಕ್ಕೆ ಚುನಾವಣೆ ನಡೆಸುವ ಭರವಸೆಯನ್ನು ನಿರ್ಮಾಪಕರ ಸಂಘದ ಜಂಟಿ ಕಾರ್ಯದರ್ಶಿ ಪ್ರವೀಣ್ ನೀಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!