ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಸಹೋದರ ದಿನಕರ್ ತೂಗುದೀಪ್ ವಿಲನ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. `ಚಕ್ರವರ್ತಿ’ ಚಿತ್ರದಲ್ಲಿ ದಿನಕರ್ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಕ್ರವರ್ತಿ ಚಿತ್ರದ ಶೂಟಿಂಗ್ ಮುಗಿದಿದೆ. ಕಳೆದೊಂದು ವಾರದಿಂದ ಹೈದ್ರಾಬಾದ್ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗಾಗಲೇ ಮೈಸೂರಿನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆದಿತ್ತು. ದರ್ಶನ್ ಈ ಚಿತ್ರದ ನಾಯಕ. ಇನ್ನು, ದಿನಕರ್ ಮಾತ್ರವಲ್ಲದೆ ದರ್ಶನ್ ಅಕ್ಕನ ಮಗ ಮನೋಜ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ.
