Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / `ಕಬಾಲಿ’ ಹಿಂದಿ ರಿಮೇಕ್‍ನಲ್ಲಿ ಅಮಿತಾಭ್ ಬಚ್ಚನ್…?

`ಕಬಾಲಿ’ ಹಿಂದಿ ರಿಮೇಕ್‍ನಲ್ಲಿ ಅಮಿತಾಭ್ ಬಚ್ಚನ್…?

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ `ಕಬಾಲಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಕ್ಷಿಣದಲ್ಲಿ ಚಿತ್ರ ಒಳ್ಳೆಯ ಸಾಧನೆ ಮಾಡುತ್ತಿದ್ದರೂ ಉತ್ತರದಲ್ಲಿ ಕಬಾಲಿ ಸಾಧನೆ ಅಷ್ಟಕಷ್ಟೇ… ಇದಕ್ಕೆ ಕಾರಣ ಭಾಷೆ ಆಗಿರಬಹುದು. ಯಾಕೆಂದರೆ, ತಮಿಳಿನ ಕಬಾಲಿ ತೆಲುಗು, ಮಲಯಾಳಂ ಮತ್ತು ಮಲಾಯ್ ಭಾಷೆಗೆ ಡಬ್ ಆಗಿದೆ. ಹೀಗಾಗಿ, ಇಲ್ಲಿ ತಮಿಳಿನ ಪ್ರಭಾವ ಇರುವುದರಿಂದ ಉತ್ತರದ ಹೆಚ್ಚಿನ ಪ್ರೇಕ್ಷಕರಿಗೆ ಈ ಚಿತ್ರ ಅಷ್ಟು ಇಷ್ಟವಾಗಿಲ್ಲ. ಅದಕ್ಕಿಂತಲೂ ತಮ್ಮ ಭಾಷೆಯಲ್ಲೇ ಚಿತ್ರವನ್ನು ನೋಡಲು ಇವರು ಬಯಸಿದ್ದಾರಂತೆ. ಹೀಗಾಗಿ, ಕಬಾಲಿಯನ್ನು ಹಿಂದಿಗೆ ರಿಮೇಕ್ ಮಾಡಲು ನಿರ್ಧರಿಸಲಾಗಿದೆ ಎನ್ನುತ್ತಿದೆ ಒಂದು ಮೂಲದ ಸುದ್ದಿ.

ಬಾಲಿವುಡ್ ಶೆಹನ್ ಷಾ ಅಮಿತಾಭ್ ಬಚ್ಚನ್ ಹಿಂದಿ ರಿಮೇಕ್‍ನಲ್ಲಿ ರಜನಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಅಮಿತಾಭ್ ಬಚ್ಚನ್ ಕಬಾಲಿಗೆ ಮತ್ತಷ್ಟು ಹೊಸತನದ ಟಚ್ ಸಿಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ.

ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಈ ಹಿಂದೆ ಅನೇಕ ಸಿನೆಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 1983ರಲ್ಲಿ ಅಂಧ ಕಾನೂನ್, 1985ರಲ್ಲಿ ಗಿರಫ್ತಾರ್, 1991ರಲ್ಲಿ ಹಮ್ ಚಿತ್ರದಲ್ಲಿ ಇವರು ಜೊತೆಯಾಗಿದ್ದರು.About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!