Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಕೃಷ್ಣಮೃಗ ಬೇಟೆ : ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

ಕೃಷ್ಣಮೃಗ ಬೇಟೆ : ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

ಜೈಪುರ : ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಕ್ಷಣಕ್ಷಣಕ್ಕೂ ಕಾಡುತ್ತಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಕೃಷ್ಣಮೃಗ ಬೇಟೆ ಪ್ರಕರಣ ಸಂಬಂಧ ದಾಖಲಾಗಿದ್ದ 2 ಪ್ರಕರಣದಲ್ಲಿ ಸಲ್ಮಾನ್‍ನಿರ್ದೋಷಿ ಎಂದು ರಾಜಸ್ಥಾನದ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ವೇಳೆ ಜೋಧಪುರದ ಕಾನ್‍ಕಾನಿ ಎಂಬ ಗ್ರಾಮದ ಬಳಿ ಎರಡು ಕೃಷ್ಣಮೃಗಳನ್ನು ಹತ್ಯೆ ಮಾಡಿದ ಪ್ರಕರಣ ಸಲ್ಮಾನ್ ವಿರುದ್ಧ ದಾಖಲಾಗಿತ್ತು. ಈ ವೇಳೆ, ಸಲ್ಮಾನ್ ಜೊತೆ ಸೈಫ್ ಅಲಿಖಾನ್, ನಿಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಕೂಡಾ ಇದ್ದರು. ಇವರ ವಿರುದ್ಧ ಕೂಡಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಖಾನ್ ದೋಷಿ ಎಂದು ಕೆಳ ಹಂತದ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಖಾನ್ ರಾಜಸ್ಥಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಮೇ ತಿಂಗಳಲ್ಲೇ ಈ ವಿಚಾರಣೆ ಮುಗಿದ್ದಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!