Wednesday , December 12 2018
ಕೇಳ್ರಪ್ಪೋ ಕೇಳಿ
Home / Sudina Special / ಒಂದು ಕಾಲದಲ್ಲಿ ದುರ್ಗಂಧ ಬೀರುತ್ತಿದ್ದ ತಾಣ ಈಗ ಸುಂದರ ಉದ್ಯಾನವನ

ಒಂದು ಕಾಲದಲ್ಲಿ ದುರ್ಗಂಧ ಬೀರುತ್ತಿದ್ದ ತಾಣ ಈಗ ಸುಂದರ ಉದ್ಯಾನವನ

ಬಂಟ್ವಾಳ : ಬಿ.ಸಿ.ರೋಡ್‍ನಲ್ಲಿ ಸದಾ ಓಡಾಡುತ್ತಿದ್ದವರಿಗೆ ಇದು ಪರಿಚಿತ ಜಾಗ… ಯಾಕೆಂದರೆ, ಇಲ್ಲಿ ಹೋಗುತ್ತಿದ್ದಾಗ ಜನ ಮೂಗು ಮುಚ್ಚಿಕೊಂಡು ಸಾಗುತ್ತಿದ್ದರು… ಅಷ್ಟೊಂದು ದುರ್ನಾತ… ಆದರೆ, ಈಗ ಕಾಲ ಬದಲಾಗಿದೆ… ಅಂದು ದುರ್ನಾತ ಬೀರುತ್ತಿದ್ದ ಈ ಜಾಗ ಈಗ ಸುಂದರ ತಾಣವಾಗಿ ಮಾರ್ಪಟ್ಟಿದೆ…
3ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿಯ ಪ್ರದೇಶದಲ್ಲಿ ಸುಂದರ ಉದ್ಯಾನವನವೊಂದು ರೂಪುಗೊಂಡಿದೆ. ಸಾರ್ವಜನಿಕ ಉದ್ಯಾನವನನ್ನು ಪರಿಸರ ಇಲಾಖೆಯ ಸಹಕಾರದೊಂದಿಗೆ ನಿರ್ಮಲ ಬಂಟ್ವಾಳ ಯೋಜನೆಯಡಿ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯಾನವನದ ಕಾಮಗಾರಿ ಇದೀಗ ಪೂರ್ಣ ಹಂತಕ್ಕೆ ತಲುಪಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ತಿಂಗಳಲ್ಲಿ ಇದರ ಲೋಕಾರ್ಪಣೆ ನಡೆಯುವ ನಿರೀಕ್ಷೆ ಇದೆ.
KAR_9011ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಎಫ್‍ಎಂ ರೇಡಿಯೋ, ವಿವಿಧ ಕಾರಂಜಿಗಳ ಸಹಿತ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಂದರ, ಸುಸಜ್ಜಿತ ಉದ್ಯಾನವನವು ಕಂಗೊಳಿಸುತ್ತಿದೆ. ಜೊತೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ವೈಫೈ ವ್ಯವಸ್ಥೆ, ಬಣ್ಣದ ಲೈಟಿಂಗ್ಸ್ ಅಳವಡಿಸಲು ನಿರ್ಧರಿಸಲಾಗಿದೆ. ಪಾರ್ಕ್‍ಗೆ ಬರುವ ಜನರಿಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ವಿಶಾಲವಾದ ಕೊಳ ಹಾಗೂ ಕಾರಂಜಿಗಳು ಈ ಪಾರ್ಕಿನ ಸೊಬಗನ್ನು ಹೆಚ್ಚಿಸಲಿದೆ. ಕಾರಂಜಿ ಹಾಗೂ ಗಿಡಗಳಿಗೆ ನೀರು ಪೂರೈಸಲು ಸುಮಾರು 100 ಅಡಿ ಆಳದ ಬಾವಿಯೊಂದನ್ನು ಪಾರ್ಕ್‍ನೊಳಗಡೆ ನಿರ್ಮಿಸಲಾಗಿದೆ.
4
ಪಾರ್ಕ್‍ನಲ್ಲಿ ಸುಮಾರು 40ರಷ್ಟು ಕಾರುಗಳನ್ನು ಪಾರ್ಕ್ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಸಭಾ ಕಾರ್ಯಕ್ರಮ ನಡೆಸಲು ಮಿನಿ ವೇದಿಕೆಯೂ 500ರಷ್ಟು ಜನರು ಸೇರಬಹುದಾದ ಸಭಾಂಗಣವೂ ಇದೆ. ಸರಕಾರದ ವಿವಿಧ ಸಮಾರಂಭಗಳನ್ನು ನಡೆಸುವ ಸಲುವಾಗಿ ಪಾರ್ಕ್‍ನಳಗೆ ಧ್ವಜಸ್ತಂಬವನ್ನು ನಿರ್ಮಿಸಲಾಗಿದೆ.

ಸಚಿವರಿಂದ ವಿಹಾರ : ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೋಮವಾರ ತಮ್ಮ ನಗರ ಪ್ರದಕ್ಷಿಣೆಯ ವೇಳೆ ಈ ಉದ್ಯಾನವನಕ್ಕೂ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆಯನ್ನು ನಡೆಸಿದರು. ಸಚಿವರು ಉದ್ಯಾನವನದ ಕಾಮಗಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಕೆಲ ಹೊತ್ತುಗಳ ಕಾಲ ಪಾರ್ಕ್‍ನಲ್ಲಿ ವಿಹರಿಸಿದರಲ್ಲದೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!