Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್ ಖುಲಾಸೆ ಖುಷಿ ತಂದಿದೆ : ಸಂಜಯ್

ಸಲ್ಮಾನ್ ಖಾನ್ ಖುಲಾಸೆ ಖುಷಿ ತಂದಿದೆ : ಸಂಜಯ್

ಮುಂಬೈ : ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಖುಲಾಸೆ ಆಗಿದ್ದಕ್ಕೆ ಅವರ ಸ್ನೇಹಿತ ಸಂಜಯ್ ದತ್ ಸಂತಸ ವ್ಯಕ್ತಪಡಿಸಿದ್ದಾರೆ. ಸಂಜಯ್ ಮತ್ತು ಸಲ್ಮಾನ್ ಗೆಳೆತನದಲ್ಲಿ ಒಡಕು ಮೂಡಿತ್ತು(ಬಾಲಿವುಡ್‍ನಲ್ಲಿ ಸಲ್ಮಾನ್ – ಸಂಜಯ್ ಕೋಲ್ಡ್ ವಾರ್…!) ಎಂದು ಈ ಹಿಂದೆ ಸುದ್ದಿಯಾಗಿತ್ತು. ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ಸಂಜಯ್, ಸಲ್ಮಾನ್ ನನ್ನ ಸಹೋದರ ಎಂದು ಹೇಳಿದ್ದಾರೆ.

ತನ್ನ ಹುಟ್ಟುಹಬ್ಬದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಂಜಯ್, ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪಿನಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದರು. 1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ಆರೋಪ ಸಲ್ಮಾನ್ ಮೇಲೆ ಇತ್ತು. (ಕೃಷ್ಣಮೃಗ ಬೇಟೆ : ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್) ಮೊನ್ನೆಯಷ್ಟೇ ನ್ಯಾಯಾಲಯ ಈ ಪ್ರಕರಣದಿಂದ ಸಲ್ಮಾನ್‍ರನ್ನು ಖುಲಾಸೆಗೊಳಿಸಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!