Monday , July 23 2018
ಕೇಳ್ರಪ್ಪೋ ಕೇಳಿ
Home / News NOW / ಸಿಎಂ ಆಪ್ತ ಮರಿಗೌಡರಿಗೆ ನ್ಯಾಯಾಂಗ ಬಂಧನ

ಸಿಎಂ ಆಪ್ತ ಮರಿಗೌಡರಿಗೆ ನ್ಯಾಯಾಂಗ ಬಂಧನ

ಮೈಸೂರು : ಜಿಲ್ಲಾಧಿಕಾರಿ ಶಿಖಾಗೆ ಧಮ್ಕಿ ಹಾಕಿ ನಾಪತ್ತೆಯಾಗಿದ್ದ ಸಿಎಂ ಆಪ್ತ ಕೆ ಮರಿಗೌಡರು ಇವತ್ತು ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ. ನಜರಾಬಾದ್ ಪೊಲೀಸರಿಗೆ ಶರಣಾದ ಮರಿಗೌಡರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೆಎಂಎಫ್‍ಸಿ ನ್ಯಾಯಾಲಯ ಮತ್ತು ಹೈಕೋರ್ಟ್‍ನಲ್ಲಿ ಮರಿಗೌಡ ಜಾಮೀನು ಅರ್ಜಿ ತಿರಸ್ಕøತವಾಗಿತ್ತು. ಅಲ್ಲದೆ, ಪೊಲೀಸರಿಗೆ ಶರಣಾಗುವಂತೆ ಮರಿಗೌಡರಿಗೆ ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಮರಿಗೌಡ ಪೊಲೀಸರಿಗೆ ಶರಣಾಗಿದ್ದಾರೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!