Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅತ್ಯಾಚಾರ : `ಪೀಪ್ಲಿ ಲೈವ್’ ಸಹ ನಿರ್ದೇಶಕನಿಗೆ ಏಳುವರ್ಷ ಜೈಲು, 50 ಸಾವಿರ ದಂಡ

ಅತ್ಯಾಚಾರ : `ಪೀಪ್ಲಿ ಲೈವ್’ ಸಹ ನಿರ್ದೇಶಕನಿಗೆ ಏಳುವರ್ಷ ಜೈಲು, 50 ಸಾವಿರ ದಂಡ

ನವದೆಹಲಿ : ಅಮೇರಿಕಾದ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ ಅಪರಾಧಕ್ಕೆ ಸಂಬಂಧಿಸಿದಂತೆ `ಪೀಪ್ಲಿ ಲೈವ್’ ಚಿತ್ರದ ಸಹನಿರ್ದೇಶಕ ಮಹಮೂದ್ ಫಾರೂಖಿಗೆ ಜೈಲು ಶಿಕ್ಷೆಯಾಗಿದೆ. ಫಾರೂಖಿಗೆ ಏಳು ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಿ ದೆಹಲಿಯ ಸಾಕೇತ್ ನ್ಯಾಯಾಲಯ ತೀರ್ಪು ನೀಡಿದೆ.

ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಮಹಮೂದ್ ಫಾರೂಖಿ ಮೇಲಿತ್ತು. ಈ ಪ್ರಕರಣದಲ್ಲಿ ಫಾರೂಖಿ ದೋಷಿ ಎಂದು ಮೊನ್ನೆಯಷ್ಟೇ ನ್ಯಾಯಾಲಯ ತೀರ್ಪು ನೀಡಿತ್ತು. ಫಾರೂಖಿ ದಂಡ ಪಾವತಿಸದಿದ್ದರೆ, ಮತ್ತೆ ಹೆಚ್ಚುವರಿಯಾಗಿ 3 ತಿಂಗಳು ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಏನಿದು ಪ್ರಕರಣ : ಇಲ್ಲಿ ಕ್ಲಿಕ್ ಮಾಡಿ…

`ಪಿಪ್ಲಿ ಲೈವ್’ ಸಹ ನಿರ್ದೇಶಕನ ವಿರುದ್ಧ ಅತ್ಯಾಚಾರ ಆರೋಪ

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!