Sunday , May 20 2018
Home / News NOW / ತುಂಬೆಯಲ್ಲಿ ಆಟಿಡೊಂಜಿ ಗಮ್ಮತ್

ತುಂಬೆಯಲ್ಲಿ ಆಟಿಡೊಂಜಿ ಗಮ್ಮತ್

ಬಂಟ್ವಾಳ: ತುಂಬೆಯ ಆಶೀರ್ವಾದ್ ಸೇವಾ ಸಂಘ ಹಾಗೂ ಮಹಿಳಾ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ತುಂಬೆ ಬೊಳ್ಳಾರಿಯ ಗದ್ದೆಯಲ್ಲಿ ಭಾನುವಾರ ವಿಶಿಷ್ಟವಾಗಿ ನಡೆಯಿತು.

ಸ್ಥಳೀಯ ಹಿರಿಯರಾದ ಸೀತರಾಮ ಬೆಳ್ಚಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಸುವರ್ಣ ತುಂಬೆ, ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ.ಪೂಜಾರಿ, ಉಪಾಧ್ಯಕ್ಷ ಪ್ರವೀಣ್ ತುಂಬೆ, ಪಂಚಾಯಿತಿ ಸದಸ್ಯರಾದ ಅರುಣ್ ಬೊಳ್ಳಾರಿ, ಶೋಭಲತಾ ಶೆಟ್ಟಿ, ನೇತ್ರಾ ಜಗನ್ನಾಥ ಶೆಟ್ಟಿ, ಮಾಜಿ ಸದಸ್ಯ ಸಂಜೀವ ಪೂಜಾರಿ ರಾಮಲ್‍ಕಟ್ಟೆ, ಪ್ರಮುಖರಾದ ಗೋಪಾಲ ಮೈಂದನ್, ಸದಾಶಿವ ತುಂಬೆ, ಸತೀಶ್ ಬೊಳ್ಳಾರಿ, ಉಮೇಶ್, ಲಕ್ಷ್ಮೀ ಮಹೇಶ್, ಅನಸೂಯ ನಾಗೇಶ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನಕ್ಕೆ ತುಳುನಾಡಿನ ತಿಂಡಿ ತಿನಿಸುಗಳು ಹಾಗೂ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಮಧ್ಯಾಹ್ನದ ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟ ನಡೆಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಆಶೀರ್ವಾದ ಸೇವಾ ಸಂಘದ ಗೌರವಾದ್ಯಕ್ಷ, ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ ಮಾತನಾಡಿ ಕಳೆದ ಮೂರು ವರ್ಷಗಳಿಂದ ಸಂಘದ ವತಿಯಿಂದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ತುಳುನಾಡಿನ ಸಂಸ್ಕøತಿ ಹಾಗೂ ಆಹಾರ ಪದ್ದತಿಯನ್ನು ಮುಂದಿನ ಯುವಜನಾಂಗಕ್ಕೆ ತಿಳಿಸಿಕೊಡುವ  ನಿಟ್ಟಿನಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಕೆಸರು ಗದ್ದೆಯಲ್ಲಿ ಮಿಂದೆದ್ದರು. ಸಂತೋಷ್ ಕೋಟ್ಯಾನ್ ಹಾಗೂ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!