Sunday , September 23 2018
ಕೇಳ್ರಪ್ಪೋ ಕೇಳಿ
Home / News NOW / ಮಯ್ಯರಬೈಲು ಕುಲಾಲ ಸುಧಾರಕ ಸಂಘದಿಂದ `ಕುಲಾಲ ಕುಟುಂಬಗಳ ಸಮ್ಮಿಲನ’

ಮಯ್ಯರಬೈಲು ಕುಲಾಲ ಸುಧಾರಕ ಸಂಘದಿಂದ `ಕುಲಾಲ ಕುಟುಂಬಗಳ ಸಮ್ಮಿಲನ’

ಬಂಟ್ವಾಳ : ತಾಲೂಕಿನ ಮಯ್ಯರಬೈಲು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಕುಲಾಲ ಸೇವಾದಳದ ವತಿಯಿಂದ ಆಗಸ್ಟ್ 28ರಂದು ಕುಲಾಲ ಸಂಘಟನೆಗಾಗಿ `ಜೊತೆ ಜೊತೆಯಲಿ’ ಎಂಬ ಆಕರ್ಷಕ ಹೆಸರಿನಲ್ಲಿ ಕುಲಾಲ ಕುಟುಂಬಗಳ ಸಮ್ಮಿಲನ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕುಲಾಲ ಸಮುದಾಯದ ಪ್ರಬುದ್ಧ ಯಕ್ಷಗಾನ, ನಾಟಕ ಕಲಾವಿದರ ಕೂಡುವಿಕೆಯೊಂದಿಗೆ ವಯೋವೃದ್ಧರಿಂದ ಹಿಡಿದು ನವ ಯುವಕ, ಯುವತಿಯರು ಮೋಜು, ಮಸ್ತಿಯೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿ.ಸಿ.ರೋಡಿನ ಪೆÇಸಳ್ಳಿಯಲ್ಲಿರುವ ನೂತನ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಕ್ಕೂ ಪ್ರಸಿದ್ಧ ಸಿನಿಮಾಗಳ ಹೆಸರನ್ನಿಟ್ಟು ಸ್ಪರ್ಧೆಯನ್ನು ಆಕರ್ಷಕಗೊಳಿಸಲಾಗಿದೆ.

ಯುವ ಪ್ರತಿಭೆಗಳಿಂದ ಯಕ್ಷ ವೈಭವ, ಡ್ಯಾನ್ಸ್ ಧಮಾಕಾ, ಭರತನಾಟ್ಯ ವೈಭವ, ಸಂಗೀತ ಧಾರೆ, ನೃತ್ಯ ವೈಭವವು ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ಯಾದವ ಅಗ್ರಬೈಲು ಮತ್ತು ಕಾರ್ಯದರ್ಶಿ ಸದಾನಂದ ಮೊಡಂಕಾಪು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!