Friday , October 19 2018
ಕೇಳ್ರಪ್ಪೋ ಕೇಳಿ
Home / Film News / ಅಮಲಾ ಪೌಲ್ ವಿಚ್ಚೇದನ : ಗಂಡ ವಿಜಯ್ ಹೇಳುವುದೇನು…?

ಅಮಲಾ ಪೌಲ್ ವಿಚ್ಚೇದನ : ಗಂಡ ವಿಜಯ್ ಹೇಳುವುದೇನು…?

ತಿರುವನಂತಪುರಂ : ನಟಿ ಅಮಲಾ ಪೌಲ್ ಮತ್ತು ವಿಜಯ್ ದಾಂಪತ್ಯ ಹಳ್ಳ ಹಿಡಿದಿರುವುದು ಹಳೇ ಸುದ್ದಿ. ಎರಡೇ ವರ್ಷದ ದಾಂಪತ್ಯ ಇಲ್ಲಿ ಕೊನೆಯಾಗಿದೆ… ಅಸಲಿಗೆ ಮದುವೆಯಾದ ಮೇಲೂ ಅಮಲಾ ಸಿನೆಮಾಗಳಲ್ಲಿ ನಟಿಸುತ್ತಿರುವ ಕಾರಣಕ್ಕೆ ಈ ದಂಪತಿ ನಡುವೆ ಜಗಳ ಆಗಿದ್ದು, ಇದೇ ವಿಚ್ಚೇದನದ ಮಟ್ಟಕ್ಕೆ ಬಂದಿದೆ ಎನ್ನುವುದು ಇದುವರೆಗಿನ ಸುದ್ದಿ ಆಗಿತ್ತು. (ಅಮಲಾ ವಿಜಯ್ ದಾಂಪತ್ಯದಲ್ಲಿ ಎಲ್ಲಾ ಸರಿ ಇದ್ಯಾ…?)ಆದರೆ, ಇದೀಗ ಸ್ವತಃ ವಿಜಯ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ನಿಜ ಅಲ್ಲ. ಅಮಲಾ ಸಿನೆಮಾದಲ್ಲಿ ಮುಂದುವರಿಯುವ ಬಗ್ಗೆ ನಾನಾಗಲಿ, ನನ್ನ ಕುಟುಂಬದವರಾಗಲಿ ವಿರೋಧ ವ್ಯಕ್ತಪಡಿಸಿಯೇ ಇಲ್ಲ ಎಂಬುದು ವಿಜಯ್ ಮಾತು.

ವಿಜಯ್ ಹೇಳಿದ್ದು : ನನ್ನ ಮತ್ತು ಅಮಲಾ ವಿಚ್ಚೇದನ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ನಾನು ನೋಡುತ್ತಿದ್ದೇನೆ. ಕೇವಲ ವದಂತಿಯನ್ನು ಇಟ್ಟುಕೊಂಡು ಈ ಸುದ್ದಿಗಳು ಹರಿದಾಡುತ್ತಿವೆ. ನಾನೊಂದು ಸತ್ಯ ನಿಮಗೆ ಹೇಳುತ್ತೇನೆ. ನಾವಿಬ್ಬರು ದೂರವಾಗುತ್ತಿದ್ದೇವೆ ಎಂಬುದು ಸತ್ಯ. (ಅಮಲಾ ಪೌಲ್ – ವಿಜಯ್ ವಿಚ್ಛೇದನ : ಸುದ್ದಿ ದೃಢಪಡಿಸಿದ ವಿಜಿ ತಂದೆ)ಆದರೆ, ಅದರಾಚೆಗೆ ಹರಿದಾಡುತ್ತಿರುವ ಸುದ್ದಿಗಳು ಮಾತ್ರ ಸುಳ್ಳು. ಈ ವಿಚ್ಚೇದನಕ್ಕೆ ಇರುವ ಕಾರಣ ನನ್ನನ್ನು ಬಿಟ್ಟು ಯಾರಿಗೂ ಗೊತ್ತಿಲ್ಲ. ನನ್ನ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ನನಗೆ ಗೊತ್ತಿದೆ. ನಾನು ಇದುವರೆಗೆ 9 ಸಿನೆಮಾಗಳನ್ನು ನಿರ್ದೇಶನ ಮಾಡಿದ್ದೇನೆ. ನನ್ನ ಎಲ್ಲಾ ಚಿತ್ರಗಳಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಚಿತ್ರಿಸಿದ್ದೇನೆ. ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ನಾನು ಈಗಲೂ ಗೌರವ ಕೊಡುತ್ತೇನೆ. ಅಮಲಾ ಚಿತ್ರರಂಗದಲ್ಲಿ ಮುಂದುವರಿಯುವ ಬಗ್ಗೆ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಯಾವುದೇ ಸಮಸ್ಯೆ ಇಲ್ಲ. ವಿರೋಧವೂ ಇಲ್ಲ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!