Monday , February 19 2018
Home / Film News / ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ…? : 2017ರ ಏಪ್ರಿಲ್ 28ಕ್ಕೆ ಹೇಳ್ತಾರಂತೆ ರಾಜಮೌಳಿ…!
Buy Bitcoin at CEX.IO

ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ…? : 2017ರ ಏಪ್ರಿಲ್ 28ಕ್ಕೆ ಹೇಳ್ತಾರಂತೆ ರಾಜಮೌಳಿ…!

ಹೈದರಾಬಾದ್ : ಸೂಪರ್ ಡೂಪರ್ ಹಿಟ್ ಚಿತ್ರ ಬಾಹುಬಲಿಯನ್ನು ನೋಡಿದವರಿಗೆ ಕಾಡುತ್ತಿದ್ದ ಒಂದೇ ಒಂದು ಪ್ರಶ್ನೆ ಅಂದರೆ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎನ್ನುವುದು… ಈ ಬಗ್ಗೆ ಅದೆಷ್ಟೋ ಚರ್ಚೆಗಳು, ಜೋಕ್ಸ್‍ಗಳು ಬಂದಿವೆ. ಈಗ ಈ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ… ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮುಂದಿನ ವರ್ಷದ ಏಪ್ರಿಲ್ ವರೆಗೆ ಕಾಯಬೇಕಾಗಿದೆ…!
bahubali
ಬಾಲಿವುಡ್ ಚಿತ್ರ ನಿರ್ದೇಶಕ ಕರಣ್ ಜೋಹರ್ `ಬಾಹುಬಲಿ 2′ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ… 2017ರ ಏಪ್ರಿಲ್ 28ಕ್ಕೆ ಬಾಹುಬಲಿಯ ಸೀಕ್ವೆಲ್ ರಿಲೀಸ್ ಆಗುತ್ತಿದೆ. ಹೀಗಾಗಿ, ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎಂಬ ಪ್ರಶ್ನೆಗೆ ಇಲ್ಲೇ ಉತ್ತರ ಸಿಗಲಿದೆ… ಈ ಚಿತ್ರದಲ್ಲಿ ರಾಜಮೌಳಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಹೀಗಾಗಿ, ಉತ್ತರ ಕಂಡುಕೊಳ್ಳಲು ಇನ್ನೂ ಒಂದಷ್ಟು ತಿಂಗಳು ಕಾಯಬೇಕಾಗಿದೆ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!