Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ಹಿರಿಯ ನಿರ್ದೇಶಕ, ಚಿತ್ರಕತೆಗಾರ ಸುಂದರಂ ಇನ್ನಿಲ್ಲ

ಹಿರಿಯ ನಿರ್ದೇಶಕ, ಚಿತ್ರಕತೆಗಾರ ಸುಂದರಂ ಇನ್ನಿಲ್ಲ

ಚೆನ್ನೈ : ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ಖ್ಯಾತ ಚಿತ್ರಕತೆಗಾರ `ವೈಥಾನಂ ವೀಧು’ ಸುಂದರಂ ವಿಧಿವಶರಾಗಿದ್ದಾರೆ. ಚೆನ್ನೈನಲ್ಲಿ ನಿನ್ನೆ ರಾತ್ರಿ ಇವರು ಕೊನೆಯುಸಿರೆಳೆದಿದ್ದಾರೆ. ಇವರಿಗೆ 76 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿ ಹಲವರನ್ನು ಸುಂದರಂ ಅಗಲಿದ್ದಾರೆ. ತಿರುಚ್ಚಿಯಲ್ಲಿ ಜನಿಸಿದ ಸುಂದರಂ ಅವರು `ವೈಥಾನಂ ವೀಧು’ ನಾಟಕ ಹಾಗೂ ಸಿನೆಮಾಕ್ಕೆ ಸ್ಕ್ರಿಪ್ಟ್ ಬರೆದ ಬಳಿಕ ಅವರ ಹೆಸರಿನ ಮುಂದೆ ಇದೊಂದು ಬಿರುದಾಗಿಯೇ ಸೇರಿಕೊಂಡಿತು. ಈ ಚಿತ್ರಕ್ಕೆ ಶಿವಾಜಿಗಣೇಶನ್ ನಾಯಕನಾಗಿದ್ದರು. ಇದು ಇವರಿಗೆ ಖ್ಯಾತಿ ತಂದುಕೊಟ್ಟಿತ್ತು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದರು. ಮಧ್ಯಮವರ್ಗದವರ ಸಂವೇದನೆಗಳು ಇವರ ಚಿತ್ರಗಳಲ್ಲಿ, ಬರಹಗಳಲ್ಲಿ ಕಾಣುತ್ತಿತ್ತು. ಅದೂ ಅಲ್ಲದೆ, ನಟರಾಗಿಯೂ ಇವರು ಗಮನ ಸೆಳೆದವರು. ಕಿರುತೆರೆಯ ಹಾಸ್ಯ ಧಾರವಾಹಿಗಳಲ್ಲಿ ನಟಿಸಿ ಇವರು ಸೈ ಎನಿಸಿಕೊಂಡಿದ್ದರು.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!