Friday , February 23 2018
Home / News NOW / ದಸರಾ ಉದ್ಘಾಟನೆಗೆ ನಾಡೋಜ ಚನ್ನವೀರ ಕಣವಿ

ದಸರಾ ಉದ್ಘಾಟನೆಗೆ ನಾಡೋಜ ಚನ್ನವೀರ ಕಣವಿ

ಬೆಂಗಳೂರು : ನಾಡಹಬ್ಬ ದಸರಾವನ್ನು ಈ ಬಾರಿ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಉದ್ಘಾಟಿಸಲಿದ್ದಾರೆ. ಉದ್ಘಾಟಕರ ಹೆಸರಿನಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಿಸಾರ್ ಅಹಮ್ಮದ್ ಸೇರಿದಂತೆ ಕೆಲವರ ಹೆಸರು ಸುಳಿದಾಡುತ್ತಿತ್ತು. ಅಂತಿಮವಾಗಿ ಚನ್ನವೀರ ಕಣವಿ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದ್ದು, ಸಿಎಂ ಸಿದ್ಧರಾಮಯ್ಯ ಫೋನ್ ಮೂಲಕ ಮಾತನಾಡಿ ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಚನ್ನವೀರ ಕಣವಿ, ಸಿಎಂ ಕರೆ ಮಾಡಿ ಮನವಿ ಮಾಡಿದಾಗ ತಾನು ಸಂತೋಷವಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ಜೊತೆಗೆ, ಇದು ರಾಜ್ಯ ಸರ್ಕಾರ ನನಗೆ ಕೊಟ್ಟಿರುವ ಗೌರವ ಎಂದೂ ಅವರು ಹೇಳಿದರು.

About sudina

Check Also

ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ

ಮಂಡ್ಯ : ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಪುಟ್ಟಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ …

Leave a Reply

Your email address will not be published. Required fields are marked *

error: Content is protected !!