ಚೆನ್ನೈ : 70 – 80ರ ದಶಕದಲ್ಲಿ ಚಿತ್ರ ನೋಡುತ್ತಿದ್ದವರಿಗೆ ಮನಸ್ಸು ಗೆದ್ದಿದ್ದ ನಟಿ ಜ್ಯೋತಿ ಲಕ್ಷ್ಮಿ ಕೊನೆಯುಸಿರೆಳೆದಿದ್ದಾರೆ. ಬಹುಭಾಷೆಗಳಲ್ಲಿ ನಟಿಸಿದ್ದ ಜ್ಯೋತಿ ಲಕ್ಷ್ಮಿ ಡ್ಯಾನ್ಸ್ ಆಗಿ ಹೆಸರುವಾಸಿ… ಕ್ಯಾಬರೇ ಡ್ಯಾನ್ಸ್ ಆಗಿ ಜ್ಯೋತಿಲಕ್ಷ್ಮಿ ಖ್ಯಾತಿ ಗಳಿಸಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಇವರು ನಟಿಸಿದ್ದರು…
ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಜ್ಯೋತಿಲಕ್ಷ್ಮಿ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಇವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಚೆನ್ನೈನ ಕನ್ನಮ್ಮಪೆಟ್ಟೈಯಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ. ಕನ್ನಡದಲ್ಲಿ ಬಹುವರ್ಷಗಳ ಬಳಿಕ ರಕ್ತಕಣ್ಣೀರು ಚಿತ್ರದಲ್ಲಿ ಇವರು ನಟಿಸಿದ್ದರು.