Friday , April 20 2018
Home / News NOW / ಸಾನಿಯಾ – ಮಾರ್ಟಿನಾ ಹಿಂಗಿಸ್ ಜೋಡಿ ದೂರ ದೂರ

ಸಾನಿಯಾ – ಮಾರ್ಟಿನಾ ಹಿಂಗಿಸ್ ಜೋಡಿ ದೂರ ದೂರ

ನವದೆಹಲಿ : ವಿಶ್ವಕಂಡ ಅತ್ಯಂತ ಯಶಸ್ಸಿ ಟೆನಿಸ್ ಜೋಡಿ ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ದೂರವಾಗುತ್ತಿದೆ… ಭಾರತ ಟೂರ್‍ನಲ್ಲಿ ಇನ್ನು ಮುಂದೆ ತಾನು ತಮ್ಮ ಜೋಡಿಯಾಗಿ ಮುಂದುವರಿಯುವುದಿಲ್ಲ ಎಂಬ ಸಂದೇಶವನ್ನು ಮಾರ್ಟಿನಾ ಸಾನಿಯಾಗೆ ನೀಡಿದ್ದಾರಂತೆ… ಕಳೆದ ಎರಡ್ಮೂರು ತಿಂಗಳಲ್ಲಿ ಈ ಜೋಡಿಯ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಈ ಜೋಡಿ ದೂರವಾಗುತ್ತಿದೆ ಎಂಬ ಒಂದು ಮಾತಿದ್ದರೂ ಟೆನಿಸ್ ಕೋರ್ಟ್‍ನಲ್ಲಿ ಇವರಿಬ್ಬರ ಸಂಬಂಧ ಈಗ ಮುಂಚಿನಷ್ಟು ಚೆನ್ನಾಗಿಲ್ಲ ಎಂದೂ ಹೇಳಲಾಗುತ್ತಿದೆ… ಇದೇ ಈ ಜೋಡಿ ಬೇರ್ಪಡಲು ಕಾರಣ ಎನ್ನುವುದು ಒಂದು ಮಾತು.

ಯುಎಸ್ ಓಪನ್ ಟೆನಿಸ್‍ನಲ್ಲಿ ಮಾರ್ಟಿನಾ ಕೊಕೊ ವಡೇಝಾಗಿರೊಂದಿಗೆ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾನಿಯಾ ಹಿಂಗಿಸ್ ಜೋಡಿ ಇದುವರೆಗೆ ಮೂರು ಗ್ರ್ಯಾಂಡ್‍ಸ್ಲಾಮ್ ಪ್ರಶಸ್ತಿಯನ್ನು ಬಾಚಿಸಿಕೊಂಡಿದೆ. ಅಲ್ಲದೆ, 2015-16ರ ಸಾಲಿನಲ್ಲಿ ಇವರಿಬ್ಬರು 9 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!