Monday , July 23 2018
ಕೇಳ್ರಪ್ಪೋ ಕೇಳಿ
Home / Sandalwood / ಆಗಸ್ಟ್ 12ರಂದು ಯಶ್ – ರಾಧಿಕಾ ನಿಶ್ಚಿತಾರ್ಥ

ಆಗಸ್ಟ್ 12ರಂದು ಯಶ್ – ರಾಧಿಕಾ ನಿಶ್ಚಿತಾರ್ಥ

ಬೆಂಗಳೂರು : ಸ್ಯಾಂಡಲ್‍ವುಡ್‍ನ ಮತ್ತೊಂದು ಪ್ರೇಮಜೋಡಿ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದೆ. ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥದ ಸಿದ್ಧತೆ ನಡೆಯುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಗೋವಾದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಗೊತ್ತಾಗಿದೆ. ಆಗಸ್ಟ್ 12ರ ಬೆಳಗ್ಗೆ 10 ಗಂಟೆಗೆ ನಿಶ್ಚಿತಾರ್ಥ ನಡೆಯಲಿದೆ. ಈಗಾಗಲೇ ಇಬ್ಬರ ಕುಟುಂಬಸ್ಥರೂ ಗೋವಾಕ್ಕೆ ತೆರಳಿದ್ದು, ಮನೆಯವರು ಮತ್ತು ಸ್ನೇಹಿತರು ಮಾತ್ರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಡಿಸೆಂಬರ್‍ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ.

ಕಳೆದ 10 ವರ್ಷದಿಂದ ಇವರಿಬ್ಬರು ಪರಿಚಿತರು. ಧಾರವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಪಂಡಿತ್ ಮತ್ತು ಯಶ್ ಬಳಿಕ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟಿಸಿದ ಬಳಿಕ ಪ್ರೀತಿಸಲು ಆರಂಭಿಸಿದರು… ಆದರೆ, ಈ ಪ್ರೀತಿಯನ್ನು ಇವರಿಬ್ಬರು ಗೌಪ್ಯವಾಗಿ ಇಟ್ಟಿದ್ದರು.. ಆದರೂ ಕೂಡಾ ಆಗೊಮ್ಮೆ ಈಗೊಮ್ಮೆ ಈ ಸುದ್ದಿ ಪ್ರಚಾರಕ್ಕೆ ಬರುತ್ತಲೇ ಇತ್ತು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!