Wednesday , August 15 2018
ಕೇಳ್ರಪ್ಪೋ ಕೇಳಿ
Home / Sandalwood / ನಾಳೆ ದಿಗಂತ್, ಐಂದ್ರಿತಾ ರೇ ಎಂಗೇಜ್‍ಮೆಂಟ್…? : ಯಾವುದು ಸತ್ಯ…? ಯಾವುದು ಸುಳ್ಳು…?

ನಾಳೆ ದಿಗಂತ್, ಐಂದ್ರಿತಾ ರೇ ಎಂಗೇಜ್‍ಮೆಂಟ್…? : ಯಾವುದು ಸತ್ಯ…? ಯಾವುದು ಸುಳ್ಳು…?

ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದಂದು ಯಶ್ ಮತ್ತು ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ನಡೆಯುತ್ತಿದೆ. ಈ ನಡುವೆ, ಮತ್ತೊಂದು ತಾರಾ ಜೋಡಿಯೊಂದು ನಿಶ್ಚಿತಾರ್ಥಕ್ಕೆ ಸಜ್ಜಾಗಿದೆಯಂತೆ. ಐಂದ್ರಿತಾ ರೇ ಮತ್ತು ದಿಗಂತ್ ಮದುವೆಗೆ ರೆಡಿಯಾಗುತ್ತಿದ್ದಾರೆ, ನಾಳೆ ಇವರಿಬ್ಬರ ಎಂಗೇಜ್‍ಮೆಂಟ್ ನಡೆಯಲಿದೆ ಎಂಬ ಸುದ್ದಿ ಹಬ್ಬಿದೆ… ಆದರೆ, ಈ ಸುದ್ದಿಯನ್ನು ಸ್ವತಃ ಐಂದ್ರಿತಾ ರೇ ತಳ್ಳಿ ಹಾಕಿದ್ದಾರೆ. ಒಂದೊಮ್ಮೆ ನಾನು ನಿಶ್ಚಿತಾರ್ಥ ಮಾಡಿಕೊಳ್ಳುವುದಾದರೆ ಅದನ್ನು ಮೊದಲೇ ಅನೌನ್ಸ್ ಮಾಡುತ್ತೇನೆ. ಈ ರೀತಿಯ ಸುದ್ದಿಯನ್ನು ದಯವಿಟ್ಟು ಹಬ್ಬಬೇಡಿ. ಒಂದೊಮ್ಮೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾದರೆ ಖಂಡಿತಾ ಅಭಿಮಾನಿಗಳಿಗೆ ತಿಳಿಸುತ್ತೇನೆ ಎಂದು ಐಂದ್ರಿತಾ ಹೇಳಿದ್ದಾರೆ…

ಒಟ್ಟಾರೆ, ಇವರಿಬ್ಬರ ನಿಶ್ಚಿತಾರ್ಥ ಸುದ್ದಿ ಹಬ್ಬಿದಂತೂ ಸತ್ಯ… ಯಶ್ ರಾಧಿಕಾ ಪಂಡಿತ್ ನಿಶ್ಚಿತಾರ್ಥದ ಅಸಲಿ ಸುದ್ದಿಯ ನಡುವೆ ಇವರಿಬ್ಬರ ಹೆಸರು ಕೂಡಾ ಸುಳಿದಾಡುತ್ತಿದ್ದು ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದು ಕೂಡಾ ನಿಜ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!