Sunday , December 16 2018
ಕೇಳ್ರಪ್ಪೋ ಕೇಳಿ
Home / Sandalwood / ಕಿಚ್ಚ ಸುದೀಪ್‍ಗೆ ಶುಭ ಹಾರೈಸಿದ ಪತ್ನಿ ಪ್ರಿಯಾ

ಕಿಚ್ಚ ಸುದೀಪ್‍ಗೆ ಶುಭ ಹಾರೈಸಿದ ಪತ್ನಿ ಪ್ರಿಯಾ

ಬೆಂಗಳೂರು : ಕಿಚ್ಚ ಸುದೀಪ್ ತನ್ನ ಬಹುನಿರೀಕ್ಷಿತ ಕೋಟಿಗೊಬ್ಬ 2 ಚಿತ್ರದ ರಿಲೀಸ್‍ಗಾಗಿ ಕಾಯುತ್ತಿದ್ದಾರೆ. ನಾಳೆ ಕಿಚ್ಚನ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ.. ಎಲ್ಲರೂ ಕಿಚ್ಚನಿಗೆ ಶುಭ ಹಾರೈಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದವರು ಅವರ ಪತ್ನಿ ಪ್ರಿಯಾ. ಟ್ವಿಟರ್‍ನಲ್ಲಿ ಪ್ರಿಯಾ ಶುಭಕೋರಿದ್ದು ಹೃದಯಸ್ಪರ್ಶಿಯಾಗಿದೆ. ಸುದೀಪ್ ಕೂಡಾ ಈ ಮೆಸೇಜ್‍ಗೆ ಖುಷಿಯಿಂದಲೇ ಪ್ರತಿಕ್ರಿಯೆ ಹಾಕಿದ್ದಾರೆ.
sudeep
ಎಲ್ಲರಿಗೂ ಗೊತ್ತಿರುವಂತೆ ಸುದೀಪ್ ಮತ್ತು ಪ್ರಿಯಾ ದಾಂಪತ್ಯದಲ್ಲಿ ಸಣ್ಣಮಟ್ಟಿನ ಬಿರುಕು ಉಂಟಾಗಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಇದಾದ ಬಳಿಕ ನಡೆದ ಸನ್ನಿವೇಶದಲ್ಲಿ ಇವರಿಬ್ಬರು ಮತ್ತೆ ಒಂದಾಗಲು ಮನಸ್ಸು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಮಗಳು ತಂದೆ ತಾಯಿಯ ಮುನಿಸನ್ನು ದೂರ ಮಾಡಿದ್ದರು… ಜೊತೆಗೆ, ಕಿಚ್ಚನ ಬಲುಇ ಷ್ಟದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ದಂಪತಿ ನಡುವೆ ಸಂಧಾನ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಸಾಕ್ಷಿ ಎಂಬಂತೆ ಪ್ರಿಯಾ ಸುದೀಪ್‍ಗೆ ಶುಭಕೋರಿದ್ದಾರೆ.

ದಂಪತಿ ಇದೇ ರೀತಿ ಎಲ್ಲಾ ಮುನಿಸು ದೂರ ಮಾಡಿಕೊಂಡು ಒಂದಾಗಿ ಬಾಳಲಿ ಎನ್ನುವುದು ಎಲ್ಲರ ಹಾರೈಕೆ… `ಸುದಿನ’ ಕೂಡಾ ಇದನ್ನೇ ಬಯಸುತ್ತದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!