Friday , September 21 2018
ಕೇಳ್ರಪ್ಪೋ ಕೇಳಿ
Home / Sandalwood / ಸಿದ್ದಗಂಗಾ ಮಠದಲ್ಲಿ `ದೊಡ್ಮನೆ ಹುಡುಗ’ನ ಆಡಿಯೋ ರಿಲೀಸ್

ಸಿದ್ದಗಂಗಾ ಮಠದಲ್ಲಿ `ದೊಡ್ಮನೆ ಹುಡುಗ’ನ ಆಡಿಯೋ ರಿಲೀಸ್

ತುಮಕೂರು : ಪುನೀತ್ ರಾಜ್‍ಕುಮಾರ್ ಮತ್ತು ಸೂರಿ ನಿರ್ದೇಶನದ ಬಹು ನಿರೀಕ್ಷಿತ `ದೊಡ್ಮನೆ ಹುಡುಗ’ ಚಿತ್ರದ ಆಡಿಯೋ ರಿಲೀಸ್ ಆಗಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಸಿದ್ದಗಂಗಾ ಶ್ರೀಗಳು ಆಡಿಯೋ ರಿಲೀಸ್ ಮಾಡಿದರು. ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಿನಿಮಾ ತಾರೆಯರೆಲ್ಲಾ ಭೇಟಿ ನೀಡಿದ್ದರು.

dodmane huduga (8) dodmane huduga dodmane huduga (1) dodmane huduga (3) dodmane huduga (4) dodmane huduga (5) dodmane huduga (6) dodmane huduga (7)ಪುನೀತ್ ರಾಜ್‍ಕುಮಾರ್ ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇನ್ನು, ಹಿರಿಯ ನಟ ಅಂಬರೀಶ್, ಭಾರತಿ ವಿಷ್ಣುವರ್ಧನ್, ನಟ ರವಿಶಂಕರ್, ನಿರ್ದೇಶಕ ಸೂರಿ, ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಹರಿಕೃಷ್ಣ ಕೂಡಾ ಭಾಗಿಯಾಗಿದ್ದರು. ಇನ್ನು, ಸಿನಿತಾರೆಯರನ್ನು ನೋಡಲು ಸಾಕಷ್ಟು ಜನ ಸೇರಿದ್ದರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪುನೀತ್ ರಾಜ್‍ಕುಮಾರ್ ಅಭಿನಯದ `ದೊಡ್ಮನೆ ಹುಡುಗ’ ಸಿನಿಮಾಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಅಂಬರೀಶ್, ಭಾರತಿ ವಿಷ್ಣುವರ್ಧನ್ ಕೂಡಾ ನಟಿಸಿದ್ದಾರೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!