Monday , February 19 2018
Home / Film News / Tollywood / ಕಮಲ್ ಹಾಸನ್ ಕುಟುಂಬದಲ್ಲಿ ಶೃತಿ ಹಾಸನ್, ಗೌತಮಿ ಜಗಳ…?
Buy Bitcoin at CEX.IO

ಕಮಲ್ ಹಾಸನ್ ಕುಟುಂಬದಲ್ಲಿ ಶೃತಿ ಹಾಸನ್, ಗೌತಮಿ ಜಗಳ…?

ಚೆನ್ನೈ : ಸೂಪರ್‍ಸ್ಟಾರ್ ಕಮಲ್ ಹಾಸನ್ ಕುಟುಂಬದಲ್ಲಿ ಸಣ್ಣಗೆ ಜಗಳ ಶುರುವಾಗಿಯಾ…? ಹೀಗೊಂದು ಪ್ರಶ್ನೆ ಕೆಲವೊಂದು ದಿನಗಳಿಂದ ಶುರುವಾಗಿದೆ. ಕಮಲ್ ಹಾಸನ್ ಮೊದಲ ಪತ್ನಿ ಸಾರಿಕಾ ಪುತ್ರಿ ಶೃತಿ ಹಾಸನ್ ಮತ್ತು ಹಾಸನ್ ಪತ್ನಿ ಗೌತಮಿ ನಡುವೆ ಸಣ್ಣಕ್ಕೆ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಸದ್ಯದ ಸುದ್ದಿ.

ಕಮಲ್ ಹಾಸನ್ ಅಭಿನಯದ ಸುಭಾಷ್ ನಾಯ್ಡು ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಕಮಲ್ ಹಾಸನ್ ಚಿತ್ರಗಳಂತೆ ಇಲ್ಲಿಯೂ ಗೌತಮಿ ಕಾಸ್ಟ್ಯೂಮ್ ಡಿಸೈನ್‍ನ ಹೊಣೆ ಹೊತ್ತಿದ್ದಾರೆ. ಶೃತಿ ಕೂಡಾ ಇಲ್ಲಿ ನಟಿಸುತ್ತಿದ್ದಾರೆ. ಆದರೆ, ಅಮೇರಿಕಾದಲ್ಲಿ ಶೂಟಿಂಗ್ ವೇಳೆ ಇವರಿಬ್ಬರ ನಡುವಿನ ಅಸಮಾಧಾನ ಬಹಿರಂಗವಾಗಿದೆಯಂತೆ. ಗೌತಮಿ ಡಿಸೈನ್ ಮಾಡಿದ ಕಾಸ್ಟ್ಯೂಮ್‍ಗಳು ನನಗೆ ಇಷ್ಟ ಹಾಗಿಲ್ಲ ಎಂದಿರುವ ಗೌತಮಿ ಅದನ್ನು ತೊಡಲು ನಿರಾಕರಿಸಿದ್ದಾರಂತೆ…! ಕಳೆದ ಕೆಲವು ದಿನಗಳಿಂದ ಈ ರೀತಿಯ ಮುಸುಕಿನ ಮುನಿಸು ಇವರಿಬ್ಬರ ನಡುವೆ ಇದ್ದು, ಶೃತಿಯನ್ನು ಯಾವ ರೀತಿ ಹ್ಯಾಂಡಲ್ ಮಾಡುವುದೆಂದು ಗೊತ್ತಾಗದೆ ಗೌತಮಿ ಚಡಪಡಿಸುತ್ತಿದ್ದಾರಂತೆ…

ಈ ಹಿಂದೆ ಗೌತಮಿ ಮತ್ತು ಶೃತಿ ಖುಷಿ ಖುಷಿಯಾಗಿಯೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು… ಪರಸ್ಪರ ಕೈ ಕುಲುಕಿ, ಚೆನ್ನಾಗಿ ಮಾತನಾಡುತ್ತಿದ್ದರು… ಆದರೆ, ಈಗ ಇವರಿಬ್ಬರ ನಡುವೆ ಸಂಬಂಧ ಹಳಸಿದೆ ಎಂದು ಸುದ್ದಿ ಹಬ್ಬಿದೆ…

CEX.IO Bitcoin Exchange

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!