Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಶವ ಸುಟ್ಟ ಬೂದಿ ಯಾವ ನದಿಗೆ ಎಸೆದಿದ್ದಾರೆ…?

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಶವ ಸುಟ್ಟ ಬೂದಿ ಯಾವ ನದಿಗೆ ಎಸೆದಿದ್ದಾರೆ…?

ಉಡುಪಿ : ಪತ್ನಿ ಮತ್ತು ಮಗನಿಂದಲೇ ಕೊಲೆಯಾಗುವ ಮೂಲಕ ತೀವ್ರ ಕುತೂಹಲಕ್ಕೆ ಮತ್ತು ಚರ್ಚೆಗೆ ಕಾರಣವಾಗಿರುವ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ಬಗೆದಷ್ಟು ಸಿಗುತ್ತಿದೆ. ಕೊಲೆ ನಡೆದು ಇಷ್ಟು ದಿನ ಆದರೂ ಹತ್ಯೆಗೆ ಬಳಸಿದ್ದ ಆಯುಧಗಳು ಇನ್ನೂ ಪತ್ತೆಯಾಗಿಲ್ಲ. ಮೃತದೇಹದ ಕುರುಹುಗಳೂ ಇನ್ನೂ ಸಿಕ್ಕಿಲ್ಲ. ಅದೂ ಅಲ್ಲದೆ, ಶವ ಸುಟ್ಟ ಬೂದಿಯನ್ನು ಯಾವ ನದಿಗೆ ಎಸೆಯಲಾಗಿದೆ ಎಂಬ ಕುರಿತು ಈಗ ಚರ್ಚೆ ಶುರುವಾಗಿದೆ…

bhaskar shetty case (5) bhaskar shetty case (7)ಯಾವ ನದಿಗೆ ಎಸೆದಿದ್ದಾರೆ? : ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಮೃತದೇಹವನ್ನು ಸುಟ್ಟ ಬಳಿಕ ಉಳಿದ ಬೂದಿಯನ್ನು ಬಂಧಿತ ಜ್ಯೋತಿಷಿ ನಿರಂಜನ್ ಭಟ್ ಮನೆಯ ಪಕ್ಕದ ಪಳ್ಳಿ ಕಲ್ಕಾರ್ ನದಿಗೆ ಎಸೆಯಲಾಗಿತ್ತು ಎಂದೇ ಇದುವರೆಗೆ ಹೇಳಲಾಗುತ್ತಿತ್ತು. ಆದರೆ, ಇದೀಗ ಬೇರೆ ನದಿಯ ಹೆಸರು ಕೇಳಿ ಬರುತ್ತಿದೆ. ಕಡಂದಲೆಯ ಶಾಂಭವಿ ನದಿಗೆ ಬೂದಿಯನ್ನು ಎಸೆಯಲಾಗಿದೆ ಎಂದು ಈಗ ಹೇಳಲಾಗುತ್ತಿದೆ. ಈ ನದಿ ಜ್ಯೋತಿಷಿ ಮನೆಯಿಂದ ಸುಮಾರು 10 ಕಿಲೋ ಮೀಟರ್ ಅಂತದಲ್ಲಿ ಇದೆ ಎನ್ನಲಾಗುತ್ತಿದ್ದು, ಪೊಲೀಸರು ಈ ನಿಟ್ಟಿನಲ್ಲೂ ಅವಶೇಷಗಳ ಹುಡುಕಾಟದಲ್ಲಿ ತೊಡಗಿದ್ದಾರೆ…
bhaskar shetty case (3) bhaskar shetty case (4)ಆರೋಪಿಗಳಿಗೆ ರಾಜಾತಿಥ್ಯ? : ಈ ನಡುವೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್‍ಗೆ ಪೊಲೀಸರು ರಾಜಾತಿಥ್ಯ ಕೊಡುತ್ತಿದ್ದಾರೆ ಎಂಬ ಆರೋಪವೂ ಆರಂಭದಿಂದಲೂ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಮೊನ್ನೆ ಐಷಾರಾಮಿ ಹೊಟೇಲ್‍ನಲ್ಲಿ ಆರೋಪಿಗಳನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಉಡುಪಿಯ ಬೆಳ್ಮಣ್ಣು ಸಮೀಪದ ನಿಟ್ಟೆ ಗ್ರಾಮದ ಸ್ಟಾರ್ ಕ್ಯಾಟಗರಿಯ ಹೋಟೆಲ್‍ನಲ್ಲಿ ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆರೋಪಿಗಳಾದ ರಾಜೇಶ್ವರಿ, ನವನೀತ, ಆರೋಪಿ ನಿರಂಜನ ಭಟ್ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರ ಈ ದೃಶ್ಯದಲ್ಲಿ ಸೆರೆಯಾಗಿದ್ದಾರೆ. ಆಗಸ್ಟ್ 10ರ ಸಂಜೆ 4 ಗಂಟೆ ಸುಮಾರಿಗೆ ಈ ವೀಡಿಯೋ ದೃಶ್ಯ ಸೆರೆ ಆಗಿದೆ. ಈ ದಿನದಂದು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದರು. ಇದಕ್ಕೂ ಮೊದಲು ಪೊಲೀಸ್ ಜೀಪಿನ ಮುಂಭಾಗದಲ್ಲಿ ಆರೋಪಿ ನವನೀತ್ ಕೂತಿದ್ದು ಕೂಡಾ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ದೃಶ್ಯ ಪೊಲೀಸರನ್ನು ಅನುಮಾನದಿಂದ ನೋಡುವಂತೆ ಮಾಡಿತ್ತು. ಈ ಎಲ್ಲದರ ನಡುವೆ, ಉಡುಪಿ ನೂತನ ಎಸ್‍ಪಿ ಕೆ.ಟಿ. ಬಾಲಕೃಷ್ಣ ತನಿಖೆಗೆ ಮೂರು ತನಿಖಾ ತಂಡವನ್ನು ರಚಿಸಿದ್ದಾರೆ.
bhaskar shetty case (2) bhaskar shetty case (1) ಪ್ರಭಾವಿಗಳ ಕೈವಾಡ…? : ಇನ್ನು, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಒಬ್ಬ ರಾಜಕಾರಣಿ ಹಾಗೂ ಒಬ್ಬ ಪ್ರಭಾವಿ ಸ್ವಾಮಿ ಒಳಗೊಂಡಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಜ್ಯೋತಿಷಿ ನಿರಂಜನ್‍ನ ಮೊಬೈಲ್ ಕಾಲ್ ಡಿಟೆಲ್ಸ್ ತನಿಖೆ ಮಾಡಿರುವ ಪೊಲೀಸರಿಗೆ, ನಿರಂಜನ್ ನಿರಂತರವಾಗಿ ಓರ್ವ ಪ್ರಭಾವಿ ಸ್ವಾಮಿ ಹಾಗೂ ಒಬ್ಬ ರಾಜಕಾರಣಿಯೊಂದಿಗೆ ಸಂಪರ್ಕದಲ್ಲಿದ್ದದ್ದು ಗೊತ್ತಾಗಿದೆ. ಭಾಸ್ಕರ್ ಶೆಟ್ಟಿಯಂತಹ ಬಹುಕೋಟಿ ಉದ್ಯಮಿಯೊಬ್ಬರನ್ನು ಇಷ್ಟು ಸಲೀಸಾಗಿ ಪತ್ನಿ ಮತ್ತು ಮಗ ಮಾತ್ರ ಸೇರಿ ಹತ್ಯೆ ಮಾಡಲು ಸಾಧ್ಯನಾ…? ಎಂಬ ಪ್ರಶ್ನೆ ಈ ಹಿಂದೆಯೇ ಇತ್ತು. ಇದಕ್ಕೆ ಪುಷ್ಟಿ ಎಂಬಂತೆ ಕಾಲ್ ಲಿಸ್ಟ್‍ನಲ್ಲಿ ಪ್ರಭಾವಿಗಳ ಹೆಸರು ಇರುವುದು ಪ್ರಕರಣವನ್ನು ಮತ್ತಷ್ಟು ಕುತೂಹಲದ ಘಟ್ಟಕ್ಕೆ ಕೊಂಡೊಯ್ಯಿದಿದೆ…
bhaskar shetty caseಏನಿದು ಪ್ರಕರಣ? : ಅರಬ್ ರಾಷ್ಟ್ರ ಮತ್ತು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಉದ್ಯಮವನ್ನು ಹೊಂದಿದ್ದ ಭಾಸ್ಕರ್ ಶೆಟ್ಟಿ ಇದೇ ವರ್ಷದ ಜುಲೈ 28ರಂದು ನಾಪತ್ತೆಯಾಗಿದ್ದರು. ಸುಮಾರು 200 ಕೋಟಿ ಮೌಲ್ಯದ ಆಸ್ತಿಗೆ ಇವರು ಒಡೆಯರಾಗಿದ್ದರು. ಇದಾದ ಬಳಿಕ ಇವರು ಕೊಲೆಯಾಗಿರುವ ಮಾಹಿತಿ ಲಭ್ಯವಾಗಿತ್ತು. ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಮತ್ತು ಅರ್ಚಕ ನಿರಂಜನ್ ಭಟ್ ಸೇರಿ ಭಾಸ್ಕರ್ ಶೆಟ್ಟಿ ಅವರನ್ನು ಹತ್ಯೆ ಮಾಡಿ ಬಳಿಕ ಹೋಮಕುಂಡದಲ್ಲಿ ಸುಟ್ಟಿದ್ದರು ಎಂಬ ಮಾಹಿತಿ ಸಿಕ್ಕ ಕೂಡಲೇ ಅವಿಭಜಿತ ದಕ್ಷಿಣ ಕನ್ನಡ ಬೆಚ್ಚಿ ಬಿದ್ದಿತ್ತು. ಬಳಿಕ ಪೊಲೀಸರು ಈ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ನಡುವೆ, ನಿರಂಜನ್ ಭಟ್ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ವಜ್ರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಸಂಗವೂ ನಡೆದಿತ್ತು. ಹೆಣ ಸುಡಲು ಈ ಮೂವರು 20 ಲೀಟರ್ ಪೆಟ್ರೋಲ್ ಬಳಸಿದ್ದರು ಎಂಬ ಮಾಹಿತಿಯೂ ಅಂದು ಲಭ್ಯವಾಗಿತ್ತು. ಈ ಪ್ರಕರಣದ ಸಂಬಂಧ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಮತ್ತು ಕಾರುಚಾಲಕ ರಾಘವೇಂದ್ರನನ್ನೂ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಆಗಸ್ಟ್ 26ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
bhaskar shetty case (6)ಈ ಎಲ್ಲಾ ಪ್ರಕರಣಕ್ಕೂ ಮುನ್ನ ಭಾಸ್ಕರ್ ಶೆಟ್ಟಿ ಹಾಗೂ ಪತ್ನಿ ಮತ್ತು ಮಗನ ನಡುವೆ ವೈಮನಸ್ಸು ಇರುವುದು ಹಾಗೂ ಇಬ್ಬರ ನಡುವೆ ಆದ ಗಲಾಟೆ ಕಳೆದ ಜೂನ್‍ನಲ್ಲಿ ಮಣಿಪಾಲ ಠಾಣೆ ಮೆಟ್ಟಿಲೇರಿತ್ತು. ಆಸ್ತಿ ವಿಚಾರದಲ್ಲಿ ಇಲ್ಲಿ ಸದಾ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ಜೊತೆಗಿನ ವೈಮನಸ್ಸಿನಿಂದ ತನ್ನ ಸ್ವಯಾರ್ಜಿತ ಆಸ್ತಿಯನ್ನು ಭಾಸ್ಕರ ಶೆಟ್ಟಿ ತಾಯಿಯ ಹೆಸರಿಗೆ ಬರೆಯಲು ಸಿದ್ಧವಾಗಿದ್ದರು ಎಂದು ಹೇಳಲಾಗಿತ್ತು. ಇದೇ ಗಲಾಟೆ ತಾರಕಕ್ಕೇರಿ ಪತ್ನಿ ಮತ್ತು ಮಗ ಭಾಸ್ಕರ್ ಶೆಟ್ಟಿ ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಕಬ್ಬಿಣದ ರಾಡ್‍ನಲ್ಲಿ ಹೊಡೆದು ಸಾಯಿಸಿದ್ದರು ಎಂದು ಆರೋಪಿಸಲಾಗಿದೆ… ಆದರೆ, ಮಗನ ಶವವನ್ನೂ ನೋಡಲಾಗಲಿಲ್ಲ ಎಂದು ತಾಯಿ ಗುಲಾಬಿ ಶೆಟ್ಟಿ ಮಾತ್ರ ಈ ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!