Monday , July 23 2018
ಕೇಳ್ರಪ್ಪೋ ಕೇಳಿ
Home / News NOW / ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಕಣ್ಮನ ಸೆಳೆದ ದೃಶ್ಯ

ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಕಣ್ಮನ ಸೆಳೆದ ದೃಶ್ಯ

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಶಿಕ್ಷಣ ಸಂಸ್ಥೆ ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ನಡೆಯಿತು. ಈ ಬಾರಿ ಇಲ್ಲಿ ಬರೋಬ್ಬರಿ 35 ಸಾವಿರ ಮಂದಿ ಧ್ವಜವಂದನೆ ಸಲ್ಲಿಸಿದರು. ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತಿತ್ತು.
alvas (6) alvas (5) alvas (4) alvas (3) alvas (2) alvas (6) alvas (5) alvas (4) alvas (3) alvas (2) alvas alvas (7) alvas (7)ಶಿಕ್ಷಣ ಮಾತ್ರವಲ್ಲದೆ ಕಲೆ, ಸಾಹಿತ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಹೆಸರು ಮಾಡಿರುವ ಈ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತದೆ. ಒಂದನೇ ತರಗತಿಯಿಂದ ಶುರುವಾಗಿ ಸ್ನಾತಕೋತ್ತರ ಪದವಿ ತನಕದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಸಮಾರಂಭದಲ್ಲಿ ಭಾಗವಹಿಸಿ ಧ್ವಜವಂದನೆ ಸಲ್ಲಿಸಿದರು.

ಮಂಗಳೂರು ಬಿಷಪ್ ಡಾ.ಎಲೋಶಿಯಸ್ ಡಿಸೋಜಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಇಷ್ಟು ಪ್ರಮಾಣದಲ್ಲಿ ಇದ್ದರೂ ಅತ್ಯಂತ ಶಿಸ್ತುಬದ್ಧವಾಗಿ ಈ ಕಾರ್ಯಕ್ರಮ ನಡೆಯಿತು. ಇದೇ ವೇಳೆ, ಇತ್ತೀಚೆಗೆ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!