Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್ ಶೆಟ್ಟಿ ಪ್ರಕರಣ : ಅವಶೇಷಗಳು ಸಿಗದಿರುವಂತೆ ಮಾಡಲಾಗಿತ್ತಾ ಪ್ಲಾನ್…?

ಭಾಸ್ಕರ್ ಶೆಟ್ಟಿ ಪ್ರಕರಣ : ಅವಶೇಷಗಳು ಸಿಗದಿರುವಂತೆ ಮಾಡಲಾಗಿತ್ತಾ ಪ್ಲಾನ್…?

ಉಡುಪಿ : 200 ಕೋಟಿ ಮೌಲ್ಯದ ಆಸ್ತಿಗಳ ಒಡೆಯ ಉಡುಪಿಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕಂಗಂಟಾಗುತ್ತಿದೆ. ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಹೆಣ ಸುಟ್ಟ ಬಳಿಕ ಆರೋಪಿಗಳ ಅವಶೇಷಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿರುವುದು ಈಗ ಬಹಿರಂಗವಾಗಿದೆ… ಈಗಿನ ಸ್ಥಿತಿಯನ್ನು ನೋಡಿದರೆ ಈ ಅವಶೇಷಗಳು ಸಿಗುವುದು ಬಹಳ ಕಷ್ಟ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಂದಳಿಕೆಯ ನಿರಂಜನ್ ಭಟ್ ಭಾಸ್ಕರ್ ಶೆಟ್ಟಿ ಮೃತದೇಹದ ಅವಶೇಷಗಳನ್ನು ಮೂರು ಕಡೆಗಳಲ್ಲಿ ಎಸೆದಿರುವಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ ಭಾಸ್ಕರ್ ಶೆಟ್ಟಿ ಮೃತದೇಹದ ಅವಶೇಷಗಳು ಪೊಲೀಸರಿಗೆ ಸಿಗುವುದು ಬಹಳ ಕಷ್ಟ…
bhaskar shetty case (1)ಅವಶೇಷಗಳು ಸಿಗುವುದು ಕಷ್ಟ…? : ನಾಪತ್ತೆಯಾಗಿರುವ ಭಾಸ್ಕರ್ ಶೆಟ್ಟಿ ಕೊಲೆಯಾಗಿರುವ ವಿಚಾರ ಯಾವತ್ತಾದರೂ ಬಹಿರಂಗವಾಗುತ್ತದೆ ಎಂಬ ವಿಷಯ ಖಂಡಿತವಾಗಿಯೂ ಆರೋಪಿಗಳಿಗೆ ಗೊತ್ತಾಗಿತ್ತು. ಹೀಗಾಗಿ, ಅವಶೇಷಗಳು ಸಿಗದ ರೀತಿಯಲ್ಲಿ ಆರೋಪಿಗಳು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಮೃತದೇಹ ಅವಶೇಷಗಳನ್ನು ಬೇರೆ ಬೇರೆ ಕಡೆ ಆರೋಪಿಗಳು ಎಸೆದಿದ್ದಾರೆ. ಇದು ಪೊಲೀಸ್ ತನಿಖೆಯ ದಿಕ್ಕು ತಪ್ಪಿಸುವ ಒಂದು ಭಾಗವೂ ಆಗಿದೆ. ಸದ್ಯದ ಮಾಹಿತಿ ಪ್ರಕಾರ ಆರೋಪಿಗಳು ಭಾಸ್ಕರ್ ಶೆಟ್ಟಿ ಅವರ ಮೂಳೆ, ಹೆಣ ಸುಟ್ಟ ಬೂದಿ ಮತ್ತು ಹೆಣ ಸುಟ್ಟ ಬಳಿಕ ಹೋಮಕುಂಡದ ಬಳಿ ತೆಗೆದ ಟೈಲ್ಸ್‍ಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಲೇವಾರಿ ಮಾಡಿದ್ದಾರೆ…! ಮೂರನ್ನು ಮೂರು ಕಡೆಗಳಲ್ಲಿ ಎಸೆದಿದ್ದಾರೆ… ಅದೂ ಅಲ್ಲದೆ, ಭಾಸ್ಕರ್ ಶೆಟ್ಟಿ ಅವರ ಮೊಬೈಲ್ ಹಾಗೂ ವಾಚನ್ನು ಕೂಡಾ ಬೇರೆ ಕಡೆ ಎಸೆಯಲಾಗಿದೆ. ಇದರೊಂದಿಗೆ ಕೊಲೆಗೆ ಬಳಸಿದ್ದ ಪೆಪ್ಪರ್ ಸ್ಪ್ರೇ, ಕಬ್ಬಿಣದ ರಾಡನ್ನು ಕೂಡಾ ಕಡಂದಲೆ ಸಮೀಪದ ನದಿಗೆ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ತುಂಬಾ ವ್ಯವಸ್ಥಿತವಾಗಿಯೇ ಆರೋಪಿಗಳು ಈ ಕೆಲಸವನ್ನು ಮುಗಿಸಿದ್ದಾರೆ. ಒಂದೇ ಕಡೆ ಅವಶೇಷಗಳನ್ನು ಹಾಕಿದರೆ ಸಮಸ್ಯೆ ಆಗಬಹುದೆಂದು ಹರಿಯುವ ನದಿಗೆ ಅವಶೇಷಗಳನ್ನು ಎಸೆಯಲಾಗಿದೆ. ಹೀಗಾಗಿ, ಈ ಅವಶೇಷಗಳು ಸದ್ಯದ ಸ್ಥಿತಿಯಲ್ಲಿ ಪೊಲೀಸರಿಗೆ ಸಿಗುವುದು ಬಹಳ ಕಷ್ಟ ಎಂದೇ ಹೇಳಲಾಗುತ್ತಿದೆ. ಆರಂಭದಲ್ಲಿ ಪಳ್ಳಿ ನದಿಗೆ ಈ ಅವಶೇಷಗಳನ್ನು ಎಸೆಯಲಾಗಿತ್ತು ಎಂದೇ ಹೇಳಲಾಗುತ್ತಿತ್ತು. (Also Read : ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಶವ ಸುಟ್ಟ ಬೂದಿ ಯಾವ ನದಿಗೆ ಎಸೆದಿದ್ದಾರೆ…?) ಆದರೆ, ಆರೋಪಿ ನಿರಂಜನ್ ಬೇರೆ ಬೇರೆ ಕಡೆಗಳಲ್ಲಿ ಅವಶೇಷ ಎಸೆದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನುವುದು ಸದ್ಯದ ಸುದ್ದಿ.
bhaskar shetty case (4)ತನಿಖೆ ಚುರುಕು : ಪ್ರಕರಣದ ಸಂಬಂಧ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್, ಜ್ಯೋತಿಷಿ ನಿರಂಜನ್ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರನನ್ನು ಪೊಲೀಸರು ಬಂಧಿಸಿ ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಅದೂ ಅಲ್ಲದೆ, ಈ ಹತ್ಯೆಯಲ್ಲಿ ಇವರಷ್ಟೇ ಅಲ್ಲದೆ ಇನ್ನೂ ಅನೇಕರು ಭಾಗಿಯಾಗಿರುವ ಶಂಕೆ ಪೊಲೀಸರಿಗೆ ಇದ್ದು, ಇನ್ನಷ್ಟು ಜನರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸಿಐಡಿ ತನಿಖೆಗೆ ಆಗ್ರಹ : ಇನ್ನು, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!