Sunday , September 23 2018
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ

ಬೆಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಆದೇಶ ನೀಡಿದೆ. ಈ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕೂಡಾ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಒತ್ತಾಯ ಮಾಡಿದ್ದರು.

ಸ್ಥಳೀಯ ಪೊಲೀಸರ ಬಗ್ಗೆ ಭಾಸ್ಕರ ಶೆಟ್ಟಿ ತಾಯಿ ಸೇರಿದಂತೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಆರೋಪಿಗಳೊಂದಿಗೆ ಕೆಲ ಪೊಲೀಸರು ಕೈಜೋಡಿಸಿದ್ದಾರೆ ಎಂಬ ಅನುಮಾನ ಇವರದ್ದು. ಹೀಗಾಗಿ. ಪ್ರಕರಣದ ತನಿಖೆಯನ್ನು ಬೇರೆ ವಿಭಾಗಕ್ಕೆ ನೀಡುವಂತೆ ಒತ್ತಾಯಿಸಿದ್ದರು. ಅದೂ ಅಲ್ಲದೆ, ಪೊಲೀಸ್ ವಾಹನದಲ್ಲಿ ಅಧಿಕಾರಿ ಕುಳಿತುಕೊಳ್ಳುವ ಜಾಗದಲ್ಲಿ ಆರೋಪಿ ನವನೀತ್ ಕುಳಿತಿದ್ದು ಮತ್ತು ಆರೋಪಿಗಳನ್ನು ಐಷಾರಾಮಿ ಹೊಟೇಲ್ ಗೆ ಊಟಕ್ಕೆ ಕರೆದುಕೊಂಡು ಹೋದ ಪ್ರಕರಣದ ಸಂಬಂಧ ಪೊಲೀಸರ ವಿರುದ್ಧ ಭಾರೀ ಟೀಕೆ ಕೇಳಿ ಬಂದಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!