Monday , January 22 2018
Home / Sudina Special / ಹೀಗೊಂದು ಸಮಾಜಸೇವೆ : ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಬಿಚ್ಚಿಟ್ಟರು `ಅರ್ಪಣಾ’ಭಾವದ ಕತೆ
Buy Bitcoin at CEX.IO

ಹೀಗೊಂದು ಸಮಾಜಸೇವೆ : ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಬಿಚ್ಚಿಟ್ಟರು `ಅರ್ಪಣಾ’ಭಾವದ ಕತೆ

ಬೆಂಗಳೂರು : ಇದೊಂದು ಸಮಾಜಮುಖಿ ಸಂಸ್ಥೆಯ ಸೇವಾ ಮನೋಭಾವನೆಯ ಕತೆ… ಈ ಸಂಸ್ಥೆಯ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್… ಇಲ್ಲಿದೆ ಸುರೇಶ್ ಕುಮಾರ್ ಅವರ ಬರಹದ ಪೂರ್ಣಪಾಠ :

ಈ ಬಾಲಕಿಯ ಹೆಸರು ಸಹನಾ. ಇಂದು ಇವಳ ಜನುಮದಿನ. ನಾನು ಹಾಸ್ಯ ಮಾಡಿದೆ. ಏನಮ್ಮ ನಿನ್ನ ಜನ್ಮದಿನವನ್ನು ಇಡೀ ದೇಶವೇ ಆಚರಿಸುತ್ತಿದೆಯಲ್ಲಾ ಎಂದು.

ಇಂದು ತನ್ನ ಜನ್ಮದಿನದ ಆಚರಣೆಯನ್ನು ತನ್ನ ತಂದೆ-ತಾಯಿ ಜೊತೆಗೆ ನಮ್ಮ ಪಂಡಿತ್ ದೀನದಯಾಳ್ ಉಪಾಧ್ಯಾಯ ಡಯಾಲಿಸಿಸ್ ಸೆಂಟರ್ ನಲ್ಲಿ ಆಚರಿಸಿದ ಸಹನಾ ಎಲ್ಲಾ ರೋಗಿಗಳಿಗೂ ಹಣ್ಣು ಹಂಪಲು ಕೊಡುವುದರೊಂದಿಗೆ ಸೆಂಟರ್ ಕಾರ್ಯಕ್ಕೆಂದು ಚೆಕ್ ಸಹಾ ಕೊಟ್ಟಳು.

ಈಕೆಯ ತಂದೆ ಸಿ.ವಿ ಸುಂದರೇಶ್ “ಅರ್ಪಣ ಸೇವಾ ಸಂಸ್ಥೆ” ಎಂಬ ಸ್ವಯಂ ಸೇವಾ ಸಂಸ್ಥೆ ಗೆ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಅವರು ಕನ್ನಡ ಚಲನಚಿತ್ರರಂಗದ ಖ್ಯಾತನಟ ದತ್ತಣ್ಣನವರೊಂದಿಗೂಡಿ ಜಯನಗರದ ಮಯ್ಯಾಸ್ ಬಳಿ ಇರುವ ಉದ್ಯಾನವನದಲ್ಲಿ ಸಾರ್ವಜನಿಕರಲ್ಲಿ ಡಯಾಲಿಸಿಸ್ ರೋಗಿಗಳ ಬಗ್ಗೆಯೂ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದ್ದಾರೆ.

ಈ ಬಗ್ಗೆ ಅರ್ಪಣಾ ಸಂಸ್ಥೆ ವಾಕಥಾನ್ ಸಹ ನಡೆಸುತ್ತಿರುತ್ತದೆ. ಇವರ ಕಾರ್ಯ ಇನ್ನು ಹೇಗೆ ನಡೆಯುತ್ತದೆ ಎನ್ನುವುದಕ್ಕೆ ಇಲ್ಲಿದೆ ನೋಡಿ:

” ಇಂದಿನ ನ್ಯೂಸ್ ಪೇಪರ್ ನಾಳಿನ ವೇಸ್ಟ್ ಪೇಪರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಹಳೇ ಪೇಪರ್ ಒಂದೋ ಕಸದ ಬುಟ್ಟಿ ಸೇರುತ್ತದೆ ಅಥವಾ ಯಾವುದಕ್ಕಾದರೂ ಪೊಟ್ಟಣವಾಗುತ್ತದೆ. ಇಲ್ಲವೇ ಕೆ.ಜಿ. ಲೆಕ್ಕದಲ್ಲಿ ಮಾರಾಟವಾಗಿ ಮರು ಬಳಕೆಯಾಗುತ್ತದೆ. ಆದರೆ ಈಗ ಅಂಥ ಹಳೇ ಪೇಪರ್ ಇನ್ನೊಬ್ಬರ ಜೀವ ರಕ್ಕಣೆಗೂ ನೆರವಾಗುತ್ತಿದೆ.

“ಇದೇನಿದು ಹಳೇ ನ್ಯೂಸ್ ಪೇಪರ್ ನಿಂದ ಪ್ರಾಣ ಉಳಿಸುವುದು ಹೇಗೆ ಎಂದು ಆಶ್ಚರ್ಯವಾಗಬಹುದು. ವಿಷಯ ಇಷ್ಟೇ….ಹಳೇ ಪೇಪರ್ ಮಾರಾಟದಿಂದ ಬಂದ ಹಣ ಬಡರೋಗಿಗಳ ಡಯಾಲಿಸಿಸ್ ಚಿಕಿತ್ಸೆಗೆ ಬಳಕೆಯಾಗುತ್ತದೆ. ಆ ನಿಟ್ಟಿನಲ್ಲಿ ಈ ಅರ್ಪಣ ಸಂಸ್ಥೆ ಯನ್ನು ತಾನು ಸಮರ್ಪಿಸಿಕೊಂಡಿದೆ.

ಈ ಸಂಸ್ಥೆಯ ಸುಮಾರು 60 ಸ್ವಯಂಸೇವಕರು ಅರ್ಪಣ ಮನೋಭಾವದಿಂದ ಮನೆ, ಅಪಾರ್ಟ್ ಮೆಂಟ್, ಕಚೇರಿ, ಹೋಟೆಲ್ ಗಳಿಗೆ ಭೇಟಿ ನೀಡಿ ಬಡವರಿಗೆ ದುಡ್ಡು ಕೇಳುವ ಬದಲಿಗೆ, ಓದಿ ಮೂಲೆಯಲ್ಲಿಟ್ಟ ಹಳೆಯ ನ್ಯೂಸ್ ಪೇಪರ್ ಕೇಳುತ್ತಾರೆ. ಹಾಗೆ ಸಂಗ್ರಹವಾದ ಹಳೇ‌ಪೇಪರ್ ಗಳನ್ನು ಮಾರಿ, ಅದರಿಂದ ಬಂದ ಹಣವನ್ನು ಬಡರೋಗಿಗಳಿಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ನೀಡುತ್ತಾರೆ.

ಹೇಗಿದೆ ಅರ್ಪಣ ಸಂಸ್ಥೆಯ ಈ ವಿಶಿಷ್ಟ ಸೇವೆ? ಹಾಗೆಯೇ ಸಹನಾಳಿಗೂ ಶುಭಾಶಯ ತಿಳಿಸೋಣ.suresh kumar 1

CEX.IO Bitcoin Exchange

About sudina

Check Also

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ …

Leave a Reply

Your email address will not be published. Required fields are marked *

error: Content is protected !!