Saturday , November 17 2018
ಕೇಳ್ರಪ್ಪೋ ಕೇಳಿ
Home / Film News / Bollywood / ಗರ್ಲ್‍ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಸಲ್ಮಾನ್ ಖಾನ್…!

ಗರ್ಲ್‍ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಸಲ್ಮಾನ್ ಖಾನ್…!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬುದು ಯಕ್ಷಪ್ರಶ್ನೆ… ಅವರ ತಂದೆಯೇ ಈ ಬಗ್ಗೆ ಕೈಚೆಲ್ಲಿದ್ದಾರೆ. ಸಲ್ಮಾನ್ ಮದುವೆ ಬಗ್ಗೆ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ ಎಂದು ಸಲ್ಮಾನ್ ತಂದೆ ಸಲೀಂ ಖಾನ್ ಮೊನ್ನೆಯಷ್ಟೇ ಹೇಳಿದ್ದರು… (Read Also : ಮಗನ ಮದುವೆ ಯಾವಾಗ ಎನ್ನುವುದು ನನಗಲ್ಲ, ಆ ದೇವರಿಗೂ ಗೊತ್ತಿರಲಿಕ್ಕಿಲ್ಲ : ಸಲ್ಮಾನ್ ಖಾನ್ ತಂದೆ ಸಲೀಂ ಖಾನ್) ಆದರೆ, ಈ ಎಲ್ಲದರ ನಡುವೆಯೇ ಸಲ್ಮಾನ್ ತನ್ನ ಗರ್ಲ್‍ಫ್ರೆಂಡ್ ರೋಮಾನಿಯಾದ ಲೂಲಿಯಾ ವಂತೂರ್ ಜೊತೆ ಸುತ್ತಾಡುತ್ತಿದ್ದಾರೆ.

ಕಬೀರ್ ಬೇಡಿ ನಿರ್ದೇಶನದ `ಟ್ಯೂಬ್‍ಲೈಟ್’ ಚಿತ್ರದ ಶೂಟಿಂಗ್‍ನಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದಾರೆ. ಲಡಾಕ್‍ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಈ ಶೂಟಿಂಗ್ ಸಂದರ್ಭದಲ್ಲಿ ಲೂಲಿಯಾ ಸಲ್ಮಾನ್ ಜೊತೆಯೇ ಇದ್ದರಂತೆ… ಅಲ್ಲದೆ, ಇವರಿಬ್ಬರು ಟಿಬೆಟ್ ಧರ್ಮಗುರು ದಲೈಲಾಮಾರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದಾರೆ. ದಲೈಲಾಮಾ ಇಬ್ಬರ ಕೈಯನ್ನೂ ಹಿಡಿದೂ ಆರ್ಶೀವದಿಸಿದ್ದಾರೆ… ಒಂದು ಮೂಲಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಸಲ್ಮಾನ್ ಮತ್ತು ಲೂಲಿಯಾ ಮದುವೆಯಾಗಲಿದ್ದಾರೆ…

1980ರಲ್ಲಿ ರೋಮಾನಿಯಾದಲ್ಲಿ ಜನಿಸಿದ ಲೂಲಿಯಾ ಕಾನೂನು ಪದವಿ ಪಡೆದಿದ್ದಾರೆ. ಸದ್ಯ ಟಿವಿ ನಿರೂಪಕಿ ಮತ್ತು ಮಾಡೆಲ್ ಆಗಿ ಇವರು ಕಾಣಿಸಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!